ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ಹೆಸರು ನನ್ನಮ್ಮ ಲೀಲಾ ಬೈಪಾಡಿತ್ತಾಯ. ಮೂಲತಃ ತೆಂಕು ತಿಟ್ಟಿನವರಾದರೂ, ಬಡಗು ಯಕ್ಷಗಾನ ರಂಗಸ್ಥಳದಲ್ಲಿ ಅವರು (ಶ್ರೀಕೃಷ್ಣ ಪಾರಿಜಾತ ಪ್ರಸಂಗ) ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮದ್ದಳೆಯಲ್ಲಿ ನಮ್ಮ ತಂದೆ ಹರಿನಾರಾಯಣ ಬೈಪಾಡಿತ್ತಾಯ, ಚೆಂಡೆಯಲ್ಲಿ ತೆಂಕು-ಬಡಗಿನ ನುಡಿತಗಳನ್ನು ಕರಗತ ಮಾಡಿಕೊಂಡಿರುವ ಶಿವಾನಂದ ಕೋಟ. ಇದು 2015ರಲ್ಲಿ ಕಾರ್ಕಳದಲ್ಲಿ ಯಕ್ಷ ಚಂದ್ರಿಕೆ ಶಶಿಕಾಂತ ಶೆಟ್ಟರು ಆಯೋಜಿಸಿದ ಆಟ.
ಇವನ್ನೂ ನೋಡಿ
ಕನ್ನಡದ ಜಪ ಮಾಡಲು ಮಗದೊಂದು ರಾಜ್ಯೋತ್ಸವ
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ! ಅಂತ ಜಿ.ಪಿ.ರಾಜರತ್ನಂ ತಮ್ಮ ಕನ್ನಡ ಮನಸ್ಸನ್ನು ಬಿಚ್ಚಿಟ್ಟಿದ್ದರು. ಇದೀಗ, ಕೈ ಕತ್ತರಿಸಿ, ನಾಲಿಗೆ ಸೀಳಿ, ಹೊಡಿ, ಬಡಿ, ಅಯೋಗ್ಯ, ಸುಳ್ಳ, ಭ್ರಷ್ಟಾಚಾರಿ, ಕಳ್ಳ...