ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ಹೆಸರು ನನ್ನಮ್ಮ ಲೀಲಾ ಬೈಪಾಡಿತ್ತಾಯ. ಮೂಲತಃ ತೆಂಕು ತಿಟ್ಟಿನವರಾದರೂ, ಬಡಗು ಯಕ್ಷಗಾನ ರಂಗಸ್ಥಳದಲ್ಲಿ ಅವರು (ಶ್ರೀಕೃಷ್ಣ ಪಾರಿಜಾತ ಪ್ರಸಂಗ) ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮದ್ದಳೆಯಲ್ಲಿ ನಮ್ಮ ತಂದೆ ಹರಿನಾರಾಯಣ ಬೈಪಾಡಿತ್ತಾಯ, ಚೆಂಡೆಯಲ್ಲಿ ತೆಂಕು-ಬಡಗಿನ ನುಡಿತಗಳನ್ನು ಕರಗತ ಮಾಡಿಕೊಂಡಿರುವ ಶಿವಾನಂದ ಕೋಟ. ಇದು 2015ರಲ್ಲಿ ಕಾರ್ಕಳದಲ್ಲಿ ಯಕ್ಷ ಚಂದ್ರಿಕೆ ಶಶಿಕಾಂತ ಶೆಟ್ಟರು ಆಯೋಜಿಸಿದ ಆಟ.
ಇವನ್ನೂ ನೋಡಿ
ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ ಪರಿಶ್ರಮವು ಇದೀಗ ಧ್ವನಿಮುದ್ರಿಕೆಯ ಮೂಲಕ ಲೋಕಮುಖಕ್ಕೆ ಪರಿಚಯವಾಗುತ್ತಿದೆ.