ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

Internet Speed: ಬ್ರಾಡ್‌ಬ್ಯಾಂಡ್ ಅಥವಾ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಯು ‘ಸೆಕೆಂಡಿಗೆ 100 ಎಂಬಿಪಿಎಸ್ ಡೌನ್‌ಲೋಡ್ ವೇಗ ಇದೆ’ ಅಂತ ಹೇಳಿಕೊಂಡಿದ್ದರೂ, ಒಂದು ಸೆಕೆಂಡಿನಲ್ಲಿ 100 ಎಂಬಿ ಫೈಲ್ ಅಥವಾ ವಿಡಿಯೊ ಡೌನ್‌ಲೋಡ್ ಮಾಡುವುದು ಸಾಧ್ಯವಾಗಿಲ್ಲ ಎಂಬುದು ಹೆಚ್ಚಿನವರ ದೂರು. ಈ ಲೇಖನ ಓದಿದ ಬಳಿಕ ನಿಮ್ಮಲ್ಲಿ ಈ ಬಗ್ಗೆ ಗೊಂದಲ ಇರುವುದಿಲ್ಲ.

ಮೆಗಾಬಿಟ್ (Mb) ಮತ್ತು ಮೆಗಾಬೈಟ್ (MB) ನಡುವಿನ ವ್ಯತ್ಯಾಸ
ಮೊದಲು ಈ ಬಿಟ್ (bit) ಎಂದರೇನೆಂದು ಅಂತ ತಿಳಿಯೋಣ. ಇದು ಮೂಲತಃ ‘ಬೈನರಿ ಡಿಜಿಟ್’ ಎಂಬುದರ ಸಂಕ್ಷಿಪ್ತ ರೂಪ. ಕಂಪ್ಯೂಟರುಗಳು ಅಥವಾ ಯಾವುದೇ ಡಿಜಿಟಲ್ ಜಗತ್ತು ಎರಡು ಅಂಕಿಗಳಲ್ಲೇ (ಸೊನ್ನೆ ಮತ್ತು 1) ನಿಂತಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವ ವಿಚಾರ. ಬಿಟ್ ಎಂಬುದು ದ್ವಿಮಾನ (0 ಮತ್ತು 1 ಬಳಸುವ) ಪದ್ಧತಿಯಲ್ಲಿ ದತ್ತಾಂಶವನ್ನು ಅಳೆಯುವ ಅತ್ಯಂತ ಸಣ್ಣ ಪ್ರಮಾಣ. 8 ಬಿಟ್‌ಗಳು ಸೇರಿದರೆ ಒಂದು ಬೈಟ್ ಆಗುತ್ತದೆ. ಬಿಟ್ ಮತ್ತು ಬೈಟ್ ನಡುವೆ ಇರುವ ಪ್ರಧಾನ ವ್ಯತ್ಯಾಸವೇ ಇದು.

ಬಹುತೇಕವಾಗಿ, ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು ಮೆಗಾಬಿಟ್ಸ್ ಎಂಬ ಮಾನಕದ ಮೂಲಕ. ಇಂಗ್ಲಿಷಿನಲ್ಲಿ ಬರೆಯುವಾಗ ವ್ಯತ್ಯಾಸವು ಎದ್ದು ಕಾಣುತ್ತದೆ Mb (ಒಂದು ಸಣ್ಣಕ್ಷರ) ಎಂದರೆ ಮೆಗಾಬಿಟ್ಸ್ ಮತ್ತು MB (ಎರಡೂ ದೊಡ್ಡಕ್ಷರ) ಎಂದರೆ ಮೆಗಾಬೈಟ್ಸ್.

ನಾವು ತಿಳಿದುಕೊಂಡಿರಬೇಕಾಗಿದ್ದು
1 ಮೆಗಾಬೈಟ್ (1MB) = 8 ಮೆಗಾಬಿಟ್ಸ್ (8Mb)
1 ಗಿಗಾಬೈಟ್ (1GB) = 8 ಗಿಗಾಬಿಟ್ಸ್ (8Gb)

ನಮಗೆಲ್ಲ ಇತ್ತೀಚೆಗೆ ಜಿಬಿ (ಗಿಗಾಬೈಟ್), ಟಿಬಿ (ಟೆರಾಬೈಟ್) ಹೆಚ್ಚು ಪರಿಚಯವಾಗಿಬಿಟ್ಟಿದೆ. ವಿಶೇಷತಃ ಮೊಬೈಲ್ ಫೋನ್‌ಗಳ ಸ್ಟೋರೇಜ್‌ಗಳು ಈಗ 256GBಯಿಂದ 512GB, 1TB ವರೆಗೆಲ್ಲ ಇದೆ ಎಂಬುದು ಈಗ ಹೆಚ್ಚು ಕೇಳಿಬರುತ್ತಿರುವ ಮಾಹಿತಿ. ಒಂದು ಜಿಬಿ ಅಥವಾ ಗಿಗಾಬೈಟ್ ಎಂದರೆ ಸಾಮಾನ್ಯವಾಗಿ ಹೇಳುವುದಾದರೆ ಒಂದು ಸಾವಿರ ಎಂಬಿ. ನಿಖರವಾಗಿ ಹೇಳುವುದಾದರೆ 1024 ಮೆಗಾಬೈಟ್ಸ್. ಅದೇ ರೀತಿ, ಒಂದು ಮೆಗಾಬೈಟ್ (MB) ಎಂದರೆ 1024 KB (ಕಿಲೋಬೈಟ್ಸ್).

ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಕಂಪನಿಗಳು ಎರಡು ವಿಧಾನಗಳಲ್ಲಿ ನಮ್ಮನ್ನು ಆಕರ್ಷಿಸಲು ಅಥವಾ ನಾವು ದಾರಿ ತಪ್ಪಲು ಅವಕಾಶ ಇದೆ. ಎಂದರೆ, ನಿಮಗೆ 100 ಎಂಬಿಪಿಎಸ್ ವೇಗದ ಸಂಪರ್ಕ ಕೊಡುತ್ತೇವೆ ಎಂದು ಅವರು ಹೇಳಬಹುದು. ವಾಸ್ತವವಾಗಿ, ಈ 100 Mbps ಸೂಪರ್‌ಫಾಸ್ಟ್ ಎಂಬುದು ನಿಜವಾದರೂ ಮತ್ತು ನಮಗೆ ಅದರ ಬಗ್ಗೆ ಖುಷಿಯಿದ್ದರೂ, ಇದರ ಅರ್ಥ ನಾವು ಸೆಕೆಂಡಿಗೆ 100MB ಫೈಲ್‌ಗಳನ್ನು ವಿನಿಮಯ (ಅಪ್‌ಲೋಡ್ ಮತ್ತು ಡೌನ್‌ಲೋಡ್) ಮಾಡಿಕೊಳ್ಳಬಹುದು ಎಂಬುದಲ್ಲ! ಅದು 100 ಮೆಗಾಬಿಟ್ಸ್ ಮಾತ್ರ. ಎಂದರೆ 12.5MBps ಮಾತ್ರ. ವಾಸ್ತವವೇನೆಂದರೆ, ಒಂದು ಮೆಗಾಬೈಟ್ (MB) ಎಂದರೆ 8 ಮೆಗಾಬಿಟ್ಸ್ (Mb). ಇದು ನಾವು ಅಂದುಕೊಂಡ ‘ಎಂಬಿ’ಗಿಂತ ಕಡಿಮೆ ವೇಗ.

ಇಂಟರ್ನೆಟ್ ಸೇವೆ ಒದಗಿಸುವವರು ಇದನ್ನೇ ಮುಂದಿಟ್ಟುಕೊಂಡು ನಮಗೆ ಅವರ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪ್ರಚಾರ ಮಾಡುತ್ತಾರೆ – 100Mbps ವರೆಗೆ ವೇಗ ಲಭ್ಯ ಅಂತ! 100Mbps ಸಂಪರ್ಕ ನಿಮ್ಮಲ್ಲಿದೆ ಎಂದಾದರೆ ಅದನ್ನು ಮೆಗಾಬೈಟ್ಸ್‌ನಲ್ಲಿ ಹೇಳುವುದಾದರೆ 12.5MBps ಮಾತ್ರ! 100Mbps ವೇಗದಲ್ಲಿ ನೀವು ಸೆಕೆಂಡಿಗೆ 12.5 ಎಂಬಿ ಗಾತ್ರದ ಫೈಲನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರ್ಥ.

ಈಗ 5ಜಿ ವೇಗದ ಇಂಟರ್ನೆಟ್ ನೆಟ್‌ವರ್ಕ್ ಸೌಕರ್ಯ ಬಂದಿದೆ. ಕೆಲವು ಕಂಪನಿಗಳು 1Gbps ವೇಗ ಇದೆ ಎಂದು ಹೇಳಿಕೊಳ್ಳುತ್ತವೆ. ಇದರರ್ಥ 3 ಜಿಬಿ ಇರುವ ವಿಡಿಯೊ ಒಂದನ್ನು ನೀವು 3 ಸೆಕೆಂಡಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದಲ್ಲ. 5ಜಿ ನೆಟ್‌ವರ್ಕ್‌ನಲ್ಲಿ ಸದ್ಯದ ಸರಾಸರಿ ವೇಗ ಸುಮಾರು 300ರಿಂದ 325 Mbps. 4ಜಿಯಲ್ಲಿ ಇದ್ದ ಸರಾಸರಿ ವೇಗ ಸುಮಾರು 15Mbps ಮಾತ್ರ.

5ಜಿ ನಾವೆಲ್ಲ ತಿಳಿದುಕೊಂಡಷ್ಟು ವೇಗ ಇಲ್ಲ ಯಾಕೆ ಎಂಬುದು ಈಗ ಗೊತ್ತಾಗಿರಬಹುದು. 1GB (ಗಿಗಾಬೈಟ್) ಫೈಲ್ ಕೇವಲ ಒಂದು ಸೆಕೆಂಡಿನಲ್ಲಿ ಡೌನ್‌ಲೋಡ್ ಆಗಬೇಕಿದ್ದರೆ ವಾಸ್ತವವಾಗಿ 8Gbps ವೇಗದ ಇಂಟರ್ನೆಟ್ ಸಂಪರ್ಕ ಬೇಕು. ಮತ್ತೂ ಸರಳವಾಗಿ ಹೇಳುವುದಾದರೆ, ಇಂಟರ್ನೆಟ್ ವೇಗವು ನಿಜಕ್ಕೂ 100Mbps ಇದ್ದರೆ 12.5MB ಇರುವ ಒಂದು ಫೈಲ್ (ಆಡಿಯೊ, ವಿಡಿಯೊ ಇತ್ಯಾದಿ) 1 ಸೆಕೆಂಡಿನಲ್ಲಿ ಡೌನ್‌ಲೋಡ್ ಆಗುತ್ತದೆ. ಅಂದರೆ ಇಂಟರ್ನೆಟ್ ವೇಗವು 100Mbps , ಫೈಲ್‌ನ ಡೌನ್‌ಲೋಡ್ ವೇಗ 12.5MBps.

Gadget Tips by me (Avinash B) published in Prajavani on 29 Nov 2023

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

5 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

5 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

6 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

6 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

7 months ago

ಒಟಿಪಿ ಇಲ್ಲದೆಯೂ ಬ್ಯಾಂಕ್ ಖಾತೆಗೆ ಕನ್ನ: ತಡೆಯಲು Aadhaar Biometric Lock ಮಾಡಿಕೊಳ್ಳಿ

Aadhaar Biometric Lock ಬಗ್ಗೆ ತಿಳಿಯೋಣ ಬನ್ನಿ. ಒಟಿಪಿ ಇಲ್ಲದೆಯೇ ಹಣ ಹೋಗುವುದನ್ನು ತಡೆಯಲು ನಮ್ಮ ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆಗೇ…

7 months ago