ಕಂಪ್ಯೂಟರ್ ಹಾಗೂ ಮೊಬೈಲ್ ಮುಂತಾದ ಸಾಧನಗಳನ್ನು ಬಳಸುತ್ತಿರುವವರಿಗೆ ಕೆಲವೊಂದು ಇಂಗ್ಲಿಷ್ ಪದಗಳ ಅರ್ಥ ತಿಳಿಯುವ ತುಡಿತ ಇರುತ್ತದೆ. ರ‍್ಯಾಮ್ ಅಂದರೇನು, ನೆಟ್ ನ್ಯೂಟ್ರಾಲಿಟಿ, ಮೆಗಾಬಿಟ್, ಕ್ಲಿಪ್ ಬೋರ್ಡ್, ಎಫ್‌ಟಿಪಿ, ಬಗ್, ಹಾರ್ಡ್ ಡಿಸ್ಕ್, ವೈರಸ್ ಮುಂತಾದವುಗಳ ಅರ್ಥವೇನು ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಲು epada.in ಎಂಬ ವೆಬ್ ತಾಣ ಈಗ ಲೋಕಾರ್ಪಣೆಗೊಂಡಿದೆ. ಕಂಪ್ಯೂಟರ್ ತಂತ್ರಜ್ಞ ಟಿ.ಜಿ.ಶ್ರೀನಿಧಿ ಅವರು ಇತ್ತೀಚೆಗೆ ಮಾಹಿತಿ ತಂತ್ರಜ್ಞಾನದಲ್ಲಿ ಬಳಕೆಯಾಗುವ ಪದಗಳ ಅರ್ಥವನ್ನು ವಿವರಿಸುವ ‘ಪದ ವಿವರಣ ಕೋಶ’ ಎಂಬ ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ತಜ್ಞರ ನೆರವಿನೊಂದಿಗೆ ರಚಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕುರಿತು ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಇದು ಅತ್ಯಮೂಲ್ಯ ಕೃತಿ. ಅದನ್ನು ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. 342 ಪುಟಗಳ ಈ ಪುಸ್ತಕದ ಅಂಶಗಳೆಲ್ಲವೂ ಈ ವೆಬ್‌ನಲ್ಲಿ ಹಾಗೂ ಪುಸ್ತಕದ ಪಿಡಿಎಫ್ ರೂಪವೂ ಉಚಿತವಾಗಿ ಲಭ್ಯವಿದೆ.
ಇವನ್ನೂ ನೋಡಿ
ಟೆಕ್ ಟಾನಿಕ್: ಜಿ-ಡ್ರೈವ್ನಲ್ಲಿ 2 ಜಿಬಿ ಹೆಚ್ಚು ಪಡೆಯಿರಿ
ಜಿಮೇಲ್ ಖಾತೆ ಹೊಂದಿರುವವರಿಗೆ ಗೂಗಲ್ ಡ್ರೈವ್ ಎಂಬ ಆನ್ಲೈನ್ (ಕ್ಲೌಡ್) ಸ್ಟೋರೇಜ್ ತಾಣದಲ್ಲಿ 15 ಜಿಬಿಯಷ್ಟು ಪ್ರಮಾಣದಲ್ಲಿ ಯಾವುದೇ ಫೈಲುಗಳನ್ನು ಉಚಿತವಾಗಿ ಸಂಗ್ರಹಿಸಿಡಬಹುದೆಂದು ಗೊತ್ತಲ್ಲವೇ? ಈ ಉಚಿತ ಸಂಗ್ರಹಣಾಗಾರಕ್ಕೆ ಇನ್ನೂ ಎರಡು ಜಿಬಿಯಷ್ಟು...