ಸ್ಮಾರ್ಟ್ ಫೋನ್‌ಗಳ ಬಳಕೆ ಹೆಚ್ಚಾಗುತ್ತಿರುವಂತೆಯೇ ಹಲವು ಡಿಜಿಟಲ್ ಸಾಧನಗಳು ಮೂಲೆಗುಂಪಾಗುತ್ತಿವೆ. ಇದಕ್ಕೆ ಕಾರಣವೆಂದರೆ ಅದರ ಬಹೂಪಯೋಗಿ ಸಾಮರ್ಥ್ಯ. ಕ್ಯಾಮೆರಾ, ಟಾರ್ಚ್ ಲೈಟ್, ಕಂಪ್ಯೂಟರ್, ಕಂಪಾಸ್, ಅಲಾರಂ… ಹೀಗೆ ಎಷ್ಟೆಷ್ಟೋ. ಆದರೆ ಅದು ಬರುವುದಕ್ಕೆ ಮುನ್ನ ಹಾಗೂ ಬಂದ ಬಳಿಕವೂ ಕೆಲವು ಸಮಯ ಹಾಡು ಪ್ರಿಯರ ಸಂಗೀತ ದಾಹವನ್ನು ತಣಿಸುತ್ತಿದ್ದ ಐಪಾಡ್‌ಗಳಿನ್ನು ಇತಿಹಾಸ ಸೇರಲಿವೆ. ಐಪಾಡ್ ನ್ಯಾನೋ ಹಾಗೂ ಐಪಾಡ್ ಶಫಲ್ ಎಂಬ, ಜೇಬಿನಲ್ಲಿಟ್ಟುಕೊಂಡು ಹಾಡು ಮತ್ತು ವೀಡಿಯೋ ಪ್ಲೇ ಮಾಡಲು ನೆರವಾಗುತ್ತಿದ್ದ ಪುಟ್ಟ ಸಾಧನಗಳ ಮಾರಾಟವನ್ನು ಆ್ಯಪಲ್ ಕಂಪನಿಯು ಎರಡು ವಾರಗಳ ಹಿಂದೆ ಸ್ಥಗಿತಗೊಳಿಸಿದೆ. ಇನ್ನು ಐಪಾಡ್ ನ್ಯಾನೋ ಮತ್ತು ಶಫಲ್ ನಿಮ್ಮ ಬಳಿ ಇದ್ದರೆ ಅದು ಆ್ಯಂಟಿಕ್ ಪೀಸ್ ಆಗಲಿದೆ!
ಇವನ್ನೂ ನೋಡಿ
ಆಂಡ್ರಾಯ್ಡ್ ಫೋನ್‌ಗಳ ‘ಸ್ಮಾರ್ಟ್’ ವೈಶಿಷ್ಟ್ಯಗಳನ್ನು ಎನೇಬಲ್ ಮಾಡುವುದು ಹೇಗೆ?
ಸಾಮಾನ್ಯ ದೂರವಾಣಿಗಳ ಸ್ಥಾನದಲ್ಲಿ ಬೇಸಿಕ್ ಫೋನ್, ಫೀಚರ್ ಫೋನ್ ಬಳಿಕ ಸ್ಮಾರ್ಟ್ ಫೋನ್ಗಳು ಬಂದು ಕಾಲವೆಷ್ಟೋ ಆಯಿತು. ಆದರೆ, ಈ ಫೋನ್ಗಳಲ್ಲಿರುವ ಸ್ಮಾರ್ಟ್ ವೈಶಿಷ್ಟ್ಯಗಳ ಬಗ್ಗೆ ಬಹುತೇಕರಿಗೆ ಇನ್ನೂ ಅರಿವಿಲ್ಲ....