ಜಿಮೇಲ್ ಬಳಸುವವರಿಗೆ ಈ ವಿಷಯ ಗೊತ್ತಿರಲಿ. ಯಾವುದೋ ಒಂದು ಮೇಲ್ ಕಳುಹಿಸಿರುತ್ತೀರಿ. ಕಳುಹಿಸಿದ ತಕ್ಷಣ, ಅದು ಅವರಿಗೆ ಕಳುಹಿಸಬಾರದಾಗಿತ್ತು ಎಂದೋ, ಅದರಲ್ಲಿ ಅಕ್ಷರ ತಪ್ಪು ಸರಿಪಡಿಸಬೇಕು ಎಂದೋ, ವಾಕ್ಯ ಸೇರಿಸಬೇಕು ಅಂತಲೋ ಅಥವಾ ಬರೆದುದು ತಪ್ಪಾಯಿತು ಅಂತಲೋ ಅರಿವಿಗೆ ಬಂದರೆ, ಕಳುಹಿಸಿದ ಸಂದೇಶವನ್ನು, ಅವರಿಗೆ ತಲುಪುವ ಮುನ್ನವೇ ವಾಪಸ್ ಕರೆಸಿಕೊಳ್ಳುವ ಆಯ್ಕೆಯೊಂದಿದೆ. ಅದುವೇ ಅನ್‌ಡು (Undo). ಮೇಲ್ ಕಳುಹಿಸಿದಾಕ್ಷಣ, ಮೇಲ್ಭಾಗದಲ್ಲಿ Undo ಅಂತ ಬಟನ್ ಕಾಣಿಸುತ್ತದೆ. 30 ಸೆಕೆಂಡುವರೆಗೆ ಇದು ಕಾಣಿಸುವಂತೆ ಮಾಡಬಹುದು. ಇದಕ್ಕಾಗಿ, ಜಿಮೇಲ್ ಸೆಟ್ಟಿಂಗ್ಸ್‌ನಲ್ಲಿ (ಗಿಯರ್ ಐಕಾನ್) ‘ಜನರಲ್’ ವಿಭಾಗದಲ್ಲಿ, Undo Send ಅಂತ ಇರುವಲ್ಲಿ 30 ಸೆಕೆಂಡು ಆಯ್ಕೆ ಮಾಡಿಕೊಂಡು, ನಂತರ ಕೆಳಗೆ ‘ಸೇವ್ ಚೇಂಜಸ್’ ಕ್ಲಿಕ್ ಮಾಡಿದರಾಯಿತು.
ಇವನ್ನೂ ನೋಡಿ
ಬದಲಾವಣೆ ಜಗದ ನಿಯಮ #HappyFathersDay
ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಅಪ್ಪ ಚಿಕ್ಕೋನಾಗುತ್ತಾ ಹೋಗುತ್ತಾನೆ ಮಕ್ಕಳು ಮಾತನಾಡಲಾರಂಭಿಸುತ್ತಾರೆ, ಅಪ್ಪ ಮೌನಿಯಾಗಲಾರಂಭಿಸಿದ್ದಾನೆ ಮಕ್ಕಳು ಮುಂದೆ ನಡೆಯಲಾರಂಭಿಸಿದ್ದಾರೆ, ಅಪ್ಪ ಹಿಂದುಳಿಯತೊಡಗುತ್ತಾನೆ ಬದಲಾವಣೆ ಜಗದ ನಿಯಮ #HappyFathersDay 'ಅಪ್ಪ' ಪದವೀಧರರಿಗೆ, ಅಮ್ಮನೂ ಆಗಬಲ್ಲ ಅಪ್ಪಂದಿರಿಗೆ, ಅಪ್ಪನ ಹೊಣೆಯನ್ನು ನಿಭಾಯಿಸುತ್ತಿರುವ ಅಮ್ಮಂದಿರಿಗೆ, ಅಪ್ಪನಂತೆ...





