ನಮ್ಮಲ್ಲಿರುವ ಸ್ಮಾರ್ಟ್ ಮೊಬೈಲ್ ಫೋನ್‌ಗಳಲ್ಲಿ ಕೆಲವೊಮ್ಮೆ ಸ್ಕ್ರೀನ್ ಶಾಟ್ ಅಂದರೆ, ಮೊಬೈಲ್ ಸ್ಕ್ರೀನ್‌ನಲ್ಲಿ ನಾವು ನೋಡುತ್ತಿರುವುದನ್ನು ಫೋಟೋ ರೂಪದಲ್ಲಿ ತೆಗೆದು, ಸ್ನೇಹಿತರಿಗೋ, ಮೊಬೈಲ್ ಫೋನ್ ದುರಸ್ತಿ ಮಾಡುವವರಿಗೋ ಕಳುಹಿಸಬೇಕಾಗುತ್ತದೆ. ಅಥವಾ ಒಂದು ಟ್ವೀಟ್, ಫೇಸ್‌ಬುಕ್ ಪೋಸ್ಟ್, ಇಲ್ಲವೇ ವಾಟ್ಸಾಪ್ ಸಂದೇಶದ ಸ್ಕ್ರೀನ್ ಶಾಟ್ ತೆಗೆಯಬೇಕಾಗುತ್ತದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ವ್ಯವಸ್ಥೆ ಹೇಗೆಂಬುದು ಬಹುತೇಕರಿಗೆ ಗೊತ್ತಿಲ್ಲ. ನಾವು ನೋಡುತ್ತಿರುವ ಸ್ಕ್ರೀನ್‌ನ ಫೋಟೋ ತೆಗೆಯಬೇಕಿದ್ದರೆ, ಹೆಚ್ಚಿನ ಮೊಬೈಲ್ ಫೋನ್‌ಗಳಲ್ಲಿ ವಾಲ್ಯೂಮ್ ಡೌನ್ ಹಾಗೂ ಪವರ್ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತಿ ಹಿಡಿದರೆ ಸಾಕು, ಕ್ಲಿಕ್ ಸದ್ದಿನೊಂದಿಗೆ ಸ್ಕ್ರೀನ್ ಶಾಟ್ ಸೇವ್ ಆಗುತ್ತದೆ. ಆದರೆ ನೆನಪಿಡಿ, ಎರಡೂ ಬಟನ್‌ಗಳನ್ನು ಏಕಕಾಲದಲ್ಲಿ ಅದುಮಬೇಕಾಗುತ್ತದೆ. ಇಲ್ಲವಾದರೆ, ವಾಲ್ಯೂಮ್ ಕಡಿಮೆ ಅಥವಾ ಸ್ಕ್ರೀನ್ ಆಫ್ ಆಗುವ ಸಾಧ್ಯತೆಗಳಿರುತ್ತವೆ. ಬಹುತೇಕ ಕಂಪನಿಗಳ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಟ್ರಿಕ್ ಕೆಲಸ ಮಾಡುತ್ತದೆ.
ಇವನ್ನೂ ನೋಡಿ
Samsung Galaxy A22: ಉತ್ತಮ ಕ್ಯಾಮೆರಾ, ಬ್ಯಾಟರಿಯ ‘ಸ್ಮಾರ್ಟ್’ ಫೋನ್
ಅತ್ಯಾಧುನಿಕ 5G ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯು ಭಾರತಕ್ಕೆ ಬರುವ ಮೊದಲು ಸಾಕಷ್ಟು ಸಂಖ್ಯೆಯಲ್ಲಿ 4ಜಿ ಅಥವಾ ಎಲ್ಟಿಇ ಗ್ರಾಹಕರನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ಸ್ಯಾಮ್ಸಂಗ್ ಇತ್ತೀಚೆಗಷ್ಟೇ ತನ್ನ 'ಎ' ಸರಣಿಯಲ್ಲಿ ಎ-22...