ಟೆಕ್‌ಟಾನಿಕ್: ವಾಟ್ಸ್ಆ್ಯಪ್ ಗ್ರೂಪ್ ಮ್ಯೂಟ್ ಮಾಡಿ

0
280

ಯಾರೋ ಒತ್ತಾಯಪಟ್ಟು ನಿರ್ದಿಷ್ಟ ವಾಟ್ಸ್ಆ್ಯಪ್ ಗ್ರೂಪಿಗೆ ನಿಮ್ಮನ್ನು ಸೇರಿಸಿದ್ದಾರೆ. ನಿಮಗಿಷ್ಟವಿಲ್ಲದ ಗುಡ್ಮಾರ್ನಿಂಗ್, ಗುಡ್‌ನೈಟ್ ಹಾಗೂ ಖಚಿತವಲ್ಲದ ಫಾರ್ವರ್ಡ್ ಮೆಸೇಜುಗಳೇ ಅದರಲ್ಲಿ ಹರಿದಾಡುತ್ತವೆ ಹೊರತು, ಉಪಯೋಗಕ್ಕಿಲ್ಲ. ಹೊರಬರುವಂತಿಲ್ಲ, ದಾಕ್ಷಿಣ್ಯ. ಇಂತಹಾ ಪರಿಸ್ಥಿತಿಯಲ್ಲಿ ಸಿಲುಕಿದ್ದೀರಾ? ವಾಟ್ಸ್ಆ್ಯಪ್ ಇದಕ್ಕೆ ಸುಲಭ ಪರಿಹಾರ ಕೊಟ್ಟಿದೆ. ಮ್ಯೂಟ್ ಮಾಡಿಬಿಡಿ. ಹೇಗಂತೀರಾ? ವಾಟ್ಸ್ಆ್ಯಪ್ ತೆರೆಯಿರಿ. ನಿಮಗಿಷ್ಟವಿಲ್ಲದ ಗ್ರೂಪನ್ನು ಒತ್ತಿ ಹಿಡಿಯಿರಿ. ಮೇಲೆ ಅಡ್ಡಗೆರೆ ಹಾಕಿದ ಧ್ವನಿವರ್ಧಕದ ಐಕಾನ್ ಕಾಣಿಸುತ್ತದೆ. ಅದನ್ನು ಒತ್ತಿರಿ. ಎಷ್ಟು ಸಮಯ (8 ಗಂಟೆ, ಒಂದು ವಾರ, ಒಂದು ವರ್ಷ) ಮ್ಯೂಟ್ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಿ. ಆ ಗ್ರೂಪಿನಿಂದ ಬರುವ ಯಾವುದೇ ನೋಟಿಫಿಕೇಶನ್‌ಗಳು ನಿಮಗೆ ಸದ್ದು ಮಾಡುವುದಿಲ್ಲ. ಸದ್ದು ಬೇಡ, ಆದರೆ ನೋಟಿಫಿಕೇಶನ್ ಕಾಣಿಸಲಿ ಎಂದಾದರೆ, ಕೆಳಗಿರುವ ಚೆಕ್ ಮಾರ್ಕ್ ಮೇಲೆ ಟಿಕ್ ಗುರುತು ಹಾಕಿ.

LEAVE A REPLY

Please enter your comment!
Please enter your name here