ಟೆಕ್ ಟಾನಿಕ್: ಗೂಗಲ್ ಅಸಿಸ್ಟೆಂಟ್ ಆಡಿಯೋ ಫೈಲ್ ಡಿಲೀಟ್ ಮಾಡುವುದು

0
223

ಗೂಗಲ್ ಅಸಿಸ್ಟೆಂಟ್ ಎಂಬ ಧ್ವನಿ ಆಧಾರಿತ ತಂತ್ರಾಂಶದ ಮೂಲಕ ನಾವೇನು ಸರ್ಚ್ ಮಾಡುತ್ತೇವೋ ಅವೆಲ್ಲವನ್ನೂ ಗೂಗಲ್ ದಾಖಲು ಮಾಡಿಟ್ಟುಕೊಂಡಿರುತ್ತದೆ ಎಂಬುದು ಗೊತ್ತು. ಆದರೆ ಇದರ ಆಡಿಯೋ ಫೈಲುಗಳು ಎಲ್ಲಿ ಯಾವಾಗ ಬೇಕಿದ್ದರೂ ಲಭ್ಯವಾಗಬಹುದು. ಜನರಿಗೆ ಅವರ ಆಸಕ್ತಿಯ ವಿಷಯ ಒದಗಿಸುವುದಕ್ಕಾಗಿಯೇ ಅವುಗಳನ್ನು ಸ್ಟೋರ್ ಮಾಡಿಟ್ಟುಕೊಳ್ಳುವುದಾಗಿ ಗೂಗಲ್ ಹೇಳುತ್ತಿದ್ದರೂ, ಅವುಗಳನ್ನೂ ಅಳಿಸಬಹುದಾಗಿದೆ. ಗೂಗಲ್‌ನ myactivity.google.com ಪುಟಕ್ಕೆ ಹೋಗಿ, Voice & Audio ಹಾಗೂ Assistant ಎಂದು ಸರ್ಚ್ ಮಾಡಿದಾಗ, ನೀವು ಧ್ವನಿ ಮೂಲಕ ಗೂಗಲ್ ಸರ್ಚ್ ಮಾಡಿದವೆಲ್ಲವೂ ಫೈಲ್‌ಗಳ ರೂಪದಲ್ಲಿ ಇಲ್ಲಿರುತ್ತವೆ.

ಎಡ ಭಾಗದಲ್ಲಿ Delete Activity By ಕ್ಲಿಕ್ ಮಾಡಿ, ದಿನಾಂಕಗಳನ್ನು ಆಯ್ಕೆ ಮಾಡಿಕೊಳ್ಳಿ. Voice & Audio ಹಾಗೂ Assistant ಎಂದು ಪ್ರತ್ಯೇಕವಾಗಿಯೇ ಎರಡು ಬಾರಿ ಸೆಲೆಕ್ಟ್ ಮಾಡಿ. ಡ್ರಾಪ್-ಡೌನ್ ಮೆನುವಿನಲ್ಲಿ ಯಾವಾಗಿನಿಂದ ಡಿಲೀಟ್ ಮಾಡಬೇಕೆಂದು ಕೇಳುತ್ತದೆ. ಎಲ್ಲವನ್ನೂ ಅಳಿಸಬೇಕಿದ್ದರೆ, ‘All Time’ ಆಯ್ಕೆ ಮಾಡಿ, ಡಿಲೀಟ್ ಮಾಡಿದರಾಯಿತು.

LEAVE A REPLY

Please enter your comment!
Please enter your name here