ಆಂಡ್ರಾಯ್ಡ್ ಫೋನ್‌ಗಳಿಗಾದರೆ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸಾಧನಗಳಿಗೆ ಆ್ಯಪಲ್ ಆಪ್ ಸ್ಟೋರ್, ವಿಂಡೋಸ್ ಸಾಧನಗಳಲ್ಲಿ ವಿಂಡೋಸ್ ಸ್ಟೋರ್ – ಹೀಗೆ ಆಯಾ ಕಾರ್ಯಾಚರಣಾ ವ್ಯವಸ್ಥೆಯ ಡಿಜಿಟಲ್ ಸಾಧನಗಳಿಗೆ ವೈವಿಧ್ಯಮಯ ಆ್ಯಪ್‌ಗಳಿರುವ ತಾಣಗಳಿವೆ. ನಮ್ಮಲ್ಲಿ ಹೆಚ್ಚು ಜನಪ್ರಿಯವಾಗಿರುವ ಮತ್ತು ನಮಗೆ ಬೇಕಾದಂತೆ ಫೋನನ್ನು ಬದಲಾಯಿಸಬಲ್ಲ ಆ್ಯಪ್‌ಗಳಿರುವ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಮಾರ್ಚ್ 2017ರ ಮಾಹಿತಿಯ ಅನುಸಾರ, 28 ಲಕ್ಷ ಆ್ಯಪ್‌ಗಳಿವೆ. ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗುತ್ತಿರುವ ಆ್ಯಪಲ್ ಸ್ಟೋರ್‌ನಲ್ಲಿರುವ ಆ್ಯಪ್‌ಗಳ ಸಂಖ್ಯೆ 22 ಲಕ್ಷ. ಇತ್ತೀಚೆಗೆ ಬೇಡಿಕೆ ಕುಸಿತ ಕಂಡಿರುವ ವಿಂಡೋಸ್ ಫೋನ್‌ಗಳ ಆ್ಯಪ್ ಸ್ಟೋರ್‌ನಲ್ಲಿ 6.69 ಲಕ್ಷ ಆ್ಯಪ್‌ಗಳಿವೆ ಎಂದು ತಿಳಿದುಬಂದಿದೆ. ಇಷ್ಟು ಲಕ್ಷಗಟ್ಟಲೆ ಆ್ಯಪ್‌ಗಳಲ್ಲಿ ನಮ್ಮ ಮೊಬೈಲ್‌ನಲ್ಲಿ ಹೆಚ್ಚೆಂದರೆ ನೂರು ಆ್ಯಪ್‌ಗಳನ್ನು ನಾವು ಬಳಸುತ್ತೇವೆ.
ಇವನ್ನೂ ನೋಡಿ
ಕಂಪ್ಯೂಟರ್ನಿಂದ Instagram ಗೆ ಫೋಟೋ ಅಪ್ಲೋಡ್ ಮಾಡುವುದು ಹೀಗೆ!
ಫೇಸ್ಬುಕ್, ಟ್ವಿಟರ್ ಮುಂತಾದವುಗಳ ಬಳಿಕ ಈಗ ಸದ್ದು ಮಾಡುತ್ತಿರುವ ಆನ್ಲೈನ್ ಸೋಷಿಯಲ್ ಮೀಡಿಯಾ ತಾಣವೆಂದರೆ ಇನ್ಸ್ಟಾಗ್ರಾಂ. ಇದು ಕೂಡ ವಾಟ್ಸ್ಆ್ಯಪ್ನಂತೆಯೇ ಫೇಸ್ಬುಕ್ ಒಡೆತನದಲ್ಲಿರುವ ತಾಣ. ಹೀಗಾಗಿ ಫೇಸ್ಬುಕ್ ಖಾತೆ ಹೊಂದಿದ್ದವರು ಇನ್ಸ್ಟಾಗ್ರಾಂನಲ್ಲಿ ಕೂಡ...