ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಫೋನ್ ನಂಬರ್ ಹಾಗೂ ರಕ್ತದ ಗುಂಪು ದಾಖಲಿಸಿದರೆ, ಆ ಪ್ರದೇಶದಲ್ಲಿ ಯಾರಿಗಾದರೂ ರಕ್ತದ ಅವಶ್ಯಕತೆಯಿದ್ದರೆ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸಲಾಗುತ್ತದೆ. ಈ ಫೇಸ್‌ಬುಕ್ ರಕ್ತದಾನಿಗಳ ಗುಂಪಿನಲ್ಲಿ ಈಗಾಗಲೇ 60 ಲಕ್ಷ ಮಂದಿ ಭಾರತೀಯರು ನೋಂದಾಯಿಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಫೇಸ್‌ಬುಕ್ ಪ್ರಕಟಿಸಿದೆ. ಈ ಯೋಜನೆಯಲ್ಲಿ ಹಲವಾರು ಟ್ರಸ್ಟ್‌ಗಳು, ಎನ್‌ಜಿಒಗಳು ಕೈಜೋಡಿಸಿದ್ದು, ಅಗತ್ಯವಿದ್ದವರಿಗೆ ರಕ್ತ ದೊರೆಯುವ ವ್ಯವಸ್ಥೆ ಇದೆ.
ಇವನ್ನೂ ನೋಡಿ
ಐಪಿಎಲ್ ಕವರೇಜ್: ವೆಬ್ಸೈಟುಗಳಿಗೆ ಕಡಿವಾಣ!
ಇಂತಿಷ್ಟೇ ಚಿತ್ರಗಳನ್ನು ಪ್ರಕಟಿಸಬೇಕು, ವೆಬ್ಸೈಟುಗಳು ಪಂದ್ಯಕ್ಕೆ ಮೊದಲು ಮತ್ತು ಪಂದ್ಯದ ನಂತರದ ಪತ್ರಿಕಾ ಗೋಷ್ಠಿಯ ವರದಿಯನ್ನಷ್ಟೇ ಪ್ರಕಟಿಸಬೇಕು, ವೆಬ್ಸೈಟುಗಳ ಪ್ರತಿನಿಧಿಗಳು, ಛಾಯಾಗ್ರಾಹಕರಿಗೆ ಪ್ರೆಸ್ ಗ್ಯಾಲರಿಗೆ ಪ್ರವೇಶ ಇರುವುದಿಲ್ಲ, ಇತರ ಮಾಧ್ಯಮಗಳು ತಮ್ಮದೇ ಛಾಯಾಗ್ರಾಹಕರ ಮೂಲಕ ತೆಗೆದ, ತಮ್ಮದೇ ಎಕ್ಸ್ಕ್ಲೂಸಿವ್ ಛಾಯಾಚಿತ್ರಗಳನ್ನು ಐಪಿಎಲ್ ಕೇಳಿದರೆ ಯಾವುದೇ ಶುಲ್ಕವಿಲ್ಲದೆ, ತಮ್ಮದೇ ಖರ್ಚಿನಲ್ಲಿ ನೀಡಬೇಕು, ಸುದ್ದಿ ಏಜೆನ್ಸಿಗಳು ಕೂಡ ವೆಬ್ಸೈಟುಗಳಿಗೆ ಚಿತ್ರಗಳನ್ನು ವಿತರಿಸುವಂತಿಲ್ಲ!


