ಆಂಡ್ರಾಯ್ಡ್ ಫೋನ್‌ಗಳಿಗಾದರೆ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸಾಧನಗಳಿಗೆ ಆ್ಯಪಲ್ ಆಪ್ ಸ್ಟೋರ್, ವಿಂಡೋಸ್ ಸಾಧನಗಳಲ್ಲಿ ವಿಂಡೋಸ್ ಸ್ಟೋರ್ – ಹೀಗೆ ಆಯಾ ಕಾರ್ಯಾಚರಣಾ ವ್ಯವಸ್ಥೆಯ ಡಿಜಿಟಲ್ ಸಾಧನಗಳಿಗೆ ವೈವಿಧ್ಯಮಯ ಆ್ಯಪ್‌ಗಳಿರುವ ತಾಣಗಳಿವೆ. ನಮ್ಮಲ್ಲಿ ಹೆಚ್ಚು ಜನಪ್ರಿಯವಾಗಿರುವ ಮತ್ತು ನಮಗೆ ಬೇಕಾದಂತೆ ಫೋನನ್ನು ಬದಲಾಯಿಸಬಲ್ಲ ಆ್ಯಪ್‌ಗಳಿರುವ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಮಾರ್ಚ್ 2017ರ ಮಾಹಿತಿಯ ಅನುಸಾರ, 28 ಲಕ್ಷ ಆ್ಯಪ್‌ಗಳಿವೆ. ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗುತ್ತಿರುವ ಆ್ಯಪಲ್ ಸ್ಟೋರ್‌ನಲ್ಲಿರುವ ಆ್ಯಪ್‌ಗಳ ಸಂಖ್ಯೆ 22 ಲಕ್ಷ. ಇತ್ತೀಚೆಗೆ ಬೇಡಿಕೆ ಕುಸಿತ ಕಂಡಿರುವ ವಿಂಡೋಸ್ ಫೋನ್‌ಗಳ ಆ್ಯಪ್ ಸ್ಟೋರ್‌ನಲ್ಲಿ 6.69 ಲಕ್ಷ ಆ್ಯಪ್‌ಗಳಿವೆ ಎಂದು ತಿಳಿದುಬಂದಿದೆ. ಇಷ್ಟು ಲಕ್ಷಗಟ್ಟಲೆ ಆ್ಯಪ್‌ಗಳಲ್ಲಿ ನಮ್ಮ ಮೊಬೈಲ್‌ನಲ್ಲಿ ಹೆಚ್ಚೆಂದರೆ ನೂರು ಆ್ಯಪ್‌ಗಳನ್ನು ನಾವು ಬಳಸುತ್ತೇವೆ.
ಇವನ್ನೂ ನೋಡಿ
ವಿರೋಧ ಪಕ್ಷವಾಗೋದು ಬೇಡ, ಪ್ರತಿ-ಪಕ್ಷವಾಗಿ!
ಜನ ಸಾಮಾನ್ಯರು ಬಹುಶಃ ರಾಜಕೀಯ ಅನ್ನುವುದನ್ನು ಅರ್ಥೈಸಿಕೊಂಡಿದ್ದೇ ಹೀಗೆ: ಹೊಲಸು, ಗಬ್ಬೆದ್ದು ಹೋದ, ನಾತ ಬೀರುತ್ತಿರುವ ರಾಜಕೀಯ ಮತ್ತು ಇಲ್ಲಿ ಸಭ್ಯರಿಗೆ ಪ್ರವೇಶ ಇಲ್ಲ, ಸಲ್ಲ. ಅದನ್ನೇ ಶಿಷ್ಟ ಭಾಷೆಯಲ್ಲಿ ಹೇಳಬಹುದಾದರೆ ಬೇಜವಾಬ್ದಾರಿ...