ಕ್ಯಾಮೆರಾ ಪ್ರಿಯರಿಗಾಗಿ Honor 10 lite ಭಾರತದಲ್ಲಿ ಬಿಡುಗಡೆ, ಬೆಲೆ ಎಷ್ಟು ಗೊತ್ತೇ?

0
209

ಹೊಸದಿಲ್ಲಿ: ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿರುವ ಹಾನರ್ 10 ಲೈಟ್ ಎಂಬ ವಿನೂತನ, ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. 24 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹಾಗೂ ಎಐ ಆಧಾರಿತ ಕ್ಯಾಮೆರಾ ಈ ಫೋನ್‌ನ ವಿಶೇಷತೆಗಳಲ್ಲೊಂದು.

ಫ್ಲಿಪ್‌ಕಾರ್ಟ್ ಹಾಗೂ ಹ್ಯುವೈ ಹಾನರ್ ಕಂಪನಿಯ ವೆಬ್ ತಾಣಗಳಲ್ಲಿ ಇದು ಮುಂದಿನ ವಾರದಿಂದ ಲಭ್ಯವಾಗಲಿದ್ದು, ಮುಂಗಡ ಬುಕಿಂಗ್ ಆರಂಭವಾಗಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಆಧಾರದಲ್ಲಿ ದೃಶ್ಯಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಉತ್ತಮ ಫೋಟೋಗಳನ್ನು ಒದಗಿಸಬಲ್ಲ ಈ ಫೋನ್ ಆಂಡ್ರಾಯ್ಡ್ 9 (ಪೈ) ಆಧಾರಿತ ಹ್ಯುವೈ ಕಂಪನಿಯದ್ದೇ ಆದ EMUI 9.0 ಕಾರ್ಯಾಚರಣಾ ವ್ಯವಸ್ಥೆಯನ್ನು ಹೊಂದಿದೆ.

ಸ್ಪೆಸಿಫಿಕೇಶನ್‌ಗಳು ಮತ್ತು ಬೆಲೆ
ವೇಗದ ಕಾರ್ಯಾಚರಣೆಗಾಗಿ HiSilicon Kirin 710 SoC ಚಿಪ್‌ಸೆಟ್ ಜತೆ ಬರುತ್ತಿರುವ ಮೊದಲ ಹಾನರ್ ಸ್ಮಾರ್ಟ್‌ಫೋನ್ 10 ಲೈಟ್ ಆಗಿದೆ. ಸ್ಕ್ರೀನ್‌ನಲ್ಲಿ ಸೆಲ್ಫೀ ಕ್ಯಾಮೆರಾವು ಡ್ಯೂ ಡ್ರಾಪ್ (ಮಂಜಿನ ಹನಿ) ಆಕಾರದಲ್ಲಿ ಪುಟ್ಟ ಜಾಗದಲ್ಲಿ ಕುಳಿತಿದ್ದು, ಕಳೆದ ವರ್ಷ (2018) ಬಿಡುಗಡೆಯಾದ ಹಾನರ್ 9 ಲೈಟ್‌ನ ಉತ್ತರಾಧಿಕಾರಿ ಈ ಫೋನ್.

4 ಜಿಬಿ ಹಾಗೂ 6 ಜಿಬಿ – ಹೀಗೆ ಎರಡು ಮಾದರಿಯ RAM ಆವೃತ್ತಿಗಳಲ್ಲಿ ಲಭ್ಯವಿರುವ ಈ ಫೋನ್, ಮಿಡ್‌ನೈಟ್ ಬ್ಲ್ಯಾಕ್, ಸಫೈರ್ ಬ್ಲೂ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಸಿಗಲಿದೆ.

  • ಇತರ ಪ್ರಮುಖ ಅಂಶಗಳು:
  • ಸ್ಕ್ರೀನ್ ಗಾತ್ರ: 6.21″ (15.77 cm)
  • ಸ್ಕ್ರೀನ್ ರೆಸೊಲ್ಯುಶನ್ 1080 x 2340 ಪಿಕ್ಸೆಲ್ಸ್
  • ಕಾರ್ಯಾಚರಣಾ ವ್ಯವಸ್ಥೆ: ಆಂಡ್ರಾಯ್ಡ್ 9.0 (Pie)
  • ಪ್ರೊಸೆಸರ್: ಒಕ್ಟಾ ಕೋರ್ (2.2 GHz, ಕ್ವಾಡ್ ಕೋರ್, ಕೋರ್ಟೆಕ್ಸ್ A73 + 1.7 GHz, ಕ್ವಾಡ್ ಕೋರ್ ಕೋರ್ಟೆಕ್ಸ್ A53)
  • ಬ್ಯಾಟರಿ: 3400 mAh.
  • ಹಿಂಭಾಗದ ಕ್ಯಾಮೆರಾ 13 MP + 2 MP (ಡ್ಯುಯಲ್ ಕ್ಯಾಮೆರಾ)
  • ಮುಂಭಾಗದ ಕ್ಯಾಮೆರಾ: 24 ಮೆಗಾಪಿಕ್ಸೆಲ್
  • ಸೆನ್ಸರ್‌ಗಳು: ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಆಕ್ಸೆಲೆರೋಮೀಟರ್, ಕಂಪಾಸ್, ಫಿಂಗರ್‌ಪ್ರಿಂಟ್ ಸೆನ್ಸರ್
  • Mali-G51 MP4 GPU.
  • ಸ್ಟೋರೇಜ್: 64 GB (512 GBವರೆಗೆ ವಿಸ್ತರಿಸಬಹುದು)
  • ಗಾತ್ರ: 7.9 mm ದಪ್ಪ ಹಾಗೂ 162 ಗ್ರಾಂ ತೂಕ.
  • ಡ್ಯುಯಲ್ ಸಿಮ್, 4G VoLTE
  • 19.5:9 ಆಸ್ಪೆಕ್ಟ್ ಅನುಪಾತ, ಬೆಝೆಲ್ ರಹಿತ ಡಿಸ್‌ಪ್ಲೇ, ಕೆಪಾಸಿಟಿವ್ ಟಚ್‌ಸ್ಕ್ರೀನ್

ಬೆಲೆ
4 ಜಿಬಿ RAM ಹಾಗೂ 64 ಜಿಬಿ ಆಂತರಿಕ ಸ್ಟೋರೇಜ್ ಇರುವ ಆವೃತ್ತಿಯ ಬೆಲೆ 13,999 ರೂ. ಹಾಗೂ 6 ಜಿಬಿ RAM ಮತ್ತು 64 ಜಿಬಿ ಆಂತರಿಕ ಮೆಮೊರಿ ಇರುವ ಆವೃತ್ತಿಯ ಬೆಲೆ 17,999 ರೂ. ಜನವರಿ 20ರಿಂದ ಇದು ಫ್ಲಿಪ್‌ಕಾರ್ಟ್ ಹಾಗೂ ಹಾನರ್ ವೆಬ್ ತಾಣಗಳ ಮೂಲಕ ಲಭ್ಯವಾಗಲಿದೆ.

ಕೊಡುಗೆ
ಹಾನರ್ 10 ಲೈಟ್ ಖರೀದಿ ಜತೆಗೆ 2,200 ರೂ. ಮೊಲ್ಯದ ಜಿಯೋ ಕ್ಯಾಶ್‌ಬ್ಯಾಕ್ ಹಾಗೂ 2,800 ರೂ. ಮೌಲ್ಯದ ಕ್ಲಿಯರ್‌ಟ್ರಿಪ್ ವೋಚರ್‌ಗಳು ದೊರೆಯಲಿದೆ.

ಹಾನರ್ 10 ಲೈಟ್ ಬಿಡುಗಡೆ

LEAVE A REPLY

Please enter your comment!
Please enter your name here