ರಾಷ್ಟ್ರೀಯ ರಕ್ತದಾನ ದಿನವಾದ ಅಕ್ಟೋಬರ್ 1ರಂದು ಫೇಸ್‌ಬುಕ್ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ರಕ್ತದಾನ ಮಾಡಲಿಚ್ಛಿಸುವವರು ಅಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರೊಫೈಲ್ ಎಡಿಟ್ ಮಾಡಿಕೊಂಡು, ತಾನು ರಕ್ತದಾನಿ ಅಂತ ಬಹಿರಂಗವಾಗಿ ಹೇಳಿಕೊಳ್ಳಬಹುದು ಇಲ್ಲವೇ ಆ ಮಾಹಿತಿಯನ್ನು ಖಾಸಗಿಯಾಗಿಟ್ಟುಕೊಳ್ಳಬಹುದು. ಆರಂಭದಲ್ಲಿ ಇದು ಆಂಡ್ರಾಯ್ಡ್ ಫೋನ್‌ಗಳ ಫೇಸ್‌ಬುಕ್ ಆ್ಯಪ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ರಕ್ತದಾನಿಗಳು ಸಿದ್ಧವಾದ ಬಳಿಕ, ರಕ್ತದ ಅಗತ್ಯವಿರುವವರಿಗೆ ಒಂದೆರಡು ವಾರಗಳಲ್ಲಿ ಮತ್ತೊಂದು ರೀತಿಯ ಆಯ್ಕೆ ಲಭ್ಯವಾಗಲಿದೆ. ಅಂದರೆ, ರಕ್ತ ಅವಶ್ಯಕತೆಯಿದೆ ಎಂದು ವಿಶೇಷ ರೀತಿಯಲ್ಲಿ ಪೋಸ್ಟ್ ಮಾಡುವ ವಿಧಾನ. ಈ ಮೂಲಕ ನೋಂದಾಯಿತ ರಕ್ತದಾನಿಗಳಿಗೆ ಸಂದೇಶವೂ ಹೋಗುತ್ತದೆ. ರಕ್ತದ ಅಗತ್ಯವಿದ್ದವರ ಕೋರಿಕೆಯು ರಕ್ತದಾನಿಗಳ ಫೇಸ್‌ಬುಕ್ ನ್ಯೂಸ್ ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತದೆ. http://www.facebook.com/donateblood/ ಎಂಬಲ್ಲಿ ಮತ್ತಷ್ಟು ಮಾಹಿತಿ ಇದೆ.
ಇವನ್ನೂ ನೋಡಿ
ನಿಮ್ಮ ‘ಸ್ಟೇಟಸ್’ ಹೇಗಿದೆ? ಕೆಲವರಿಗಷ್ಟೇ ಗೋಚರವಾಗುವಂತೆ ಮಾಡಬಹುದು WhatsApp Status
ವಾಟ್ಸ್ಆ್ಯಪ್ ಎಂಬ ಸಂದೇಶ ವಿನಿಮಯ ಕಿರು ತಂತ್ರಾಂಶಕ್ಕೆ ಹೆಚ್ಚಿನವರು ಮಾರು ಹೋಗಿದ್ದೇವೆ. ಸಂದೇಶ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ ಇದು. ಇದರಲ್ಲಿರುವ 'ಸ್ಟೇಟಸ್' ಎಂಬ ವೈಶಿಷ್ಟ್ಯವು ವೈವಿಧ್ಯಮಯ ರೀತಿಯಲ್ಲಿ ಬಳಕೆಯಾಗುತ್ತಿದೆ.