ಹೊಸದಾಗಿ ಸ್ಮಾರ್ಟ್ ಫೋನ್ ಹೊಂದುವವರಿಗೆ Jiophone Next ತುಂಬ ಇಷ್ಟವಾಗಬಹುದು. ಸಾಮಾನ್ಯ ಬಳಕೆಗೆ ಸೂಕ್ತ. 1.3GHz ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 215 ಕ್ವಾಡ್ ಕೋರ್ ಪ್ರೊಸೆಸರ್ ಮತ್ತು 2ಜಿಬಿ RAM ಇದರಲ್ಲಿರುವುದರಿಂದ, ಹೆಚ್ಚಿನ ವೇಗ ನಿರೀಕ್ಷಿಸಲಾಗದು. ಬಹುತೇಕ ಎಲ್ಲ ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ಗಳಂತೆಯೇ ಈ ಫೋನ್ ಕೂಡ ಕಾರ್ಯಾಚರಿಸುತ್ತದೆ. ಗೇಮಿಂಗ್ಗೆ ಇದು ಪೂರಕವಲ್ಲದಿದ್ದರೂ ವಿಡಿಯೊಗಳನ್ನು ಟಿವಿಗೆ ಸ್ಟ್ರೀಮ್ ಮಾಡಲು ಸಮಸ್ಯೆಯಾಗಲಿಲ್ಲ