ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹಾಗೂ ನಮ್ಮ ಸ್ಮಾರ್ಟ್ ಫೋನ್ ನಡುವೆ ಫೈಲುಗಳನ್ನು ಪರಸ್ಪರ ವರ್ಗಾಯಿಸಿಕೊಳ್ಳಲು, ಯುಎಸ್‌ಬಿ ಕೇಬಲ್ ಬೇಕೂಂತೇನೂ ಇಲ್ಲ. ಬ್ಲೂಟೂತ್ ಎಂಬ ವ್ಯವಸ್ಥೆಯ ಮೂಲಕವೂ ಸಾಧ್ಯ ಎಂಬುದು ಕೆಲವರಿಗೆ ತಿಳಿದಿಲ್ಲ. ಇದಕ್ಕಾಗಿ, ಮೊಬೈಲ್‌ನಲ್ಲಿ ಬ್ಲೂಟೂತ್ ಆನ್ ಮಾಡಿ, ಕಂಪ್ಯೂಟರಿನಲ್ಲಿ ಕಂಟ್ರೋಲ್ ಪ್ಯಾನೆಲ್‌ನಲ್ಲಿ ಡಿವೈಸಸ್ ಎಂದಿರುವಲ್ಲಿ ಬ್ಲೂಟೂತ್ ಕ್ಲಿಕ್ ಮಾಡಿದಾಗ, ಪಕ್ಕದಲ್ಲಿರುವ, ಬ್ಲೂಟೂತ್ ಆನ್ ಇರುವ ಸಾಧನಗಳ ಪಟ್ಟಿಯನ್ನು ತೋರಿಸುತ್ತದೆ. ನಿಮ್ಮ ಮೊಬೈಲ್ ಸಾಧನವನ್ನು ಕ್ಲಿಕ್ ಮಾಡಿ ಪೇರ್ ಬಟನ್ ಒತ್ತಿ. ಒಂದು ಪಿನ್ ಸಂಖ್ಯೆ ಕಾಣಿಸುತ್ತದೆ. ಮೊಬೈಲಲ್ಲೂ ಅದೇ ಕಾಣಿಸುತ್ತದೆಯೇ ಎಂದು ನೋಡಿ ಎರಡೂ ಕಡೆ ಅಕ್ಸೆಪ್ಟ್ ಬಟನ್ ಕ್ಲಿಕ್ ಮಾಡಿ. ಇನ್ನು ಯಾವುದೇ ಫೈಲನ್ನು ರೈಟ್ ಕ್ಲಿಕ್ ಮಾಡಿ, Through Bluetooth ಎಂಬ ಆಯ್ಕೆ ಬಳಸಿದಾಗ, ನಿಮ್ಮ ಮೊಬೈಲ್ ಹೆಸರು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ಫೈಲ್ ಕಳುಹಿಸಿ.
ಇವನ್ನೂ ನೋಡಿ
ಡಿಜಿಟಲ್ ವ್ಯಸನವೇ?: ಸ್ಕ್ರೀನ್ ಟೈಮ್ ನಿಗದಿಪಡಿಸಲು ಇದೋ ಇಲ್ಲಿದೆ ಮಾಹಿತಿ
My Article in Prajavani Olanota on 17 Nov 2019 ಸ್ಕ್ರೀನ್ ಟೈಮ್ (ಡಿಜಿಟಲ್ ಸಾಧನದ ಸ್ಕ್ರೀನ್ ನೋಡುವ ಸಮಯ) ನಿಯಂತ್ರಿಸುವ ಬಗ್ಗೆ ಇತ್ತೀಚೆಗೆ ಗಂಭೀರವಾಗಿಯೇ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಆ್ಯಪಲ್ ಕಂಪ...