ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಫೋನ್ ನಂಬರ್ ಹಾಗೂ ರಕ್ತದ ಗುಂಪು ದಾಖಲಿಸಿದರೆ, ಆ ಪ್ರದೇಶದಲ್ಲಿ ಯಾರಿಗಾದರೂ ರಕ್ತದ ಅವಶ್ಯಕತೆಯಿದ್ದರೆ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸಲಾಗುತ್ತದೆ. ಈ ಫೇಸ್‌ಬುಕ್ ರಕ್ತದಾನಿಗಳ ಗುಂಪಿನಲ್ಲಿ ಈಗಾಗಲೇ 60 ಲಕ್ಷ ಮಂದಿ ಭಾರತೀಯರು ನೋಂದಾಯಿಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಫೇಸ್‌ಬುಕ್ ಪ್ರಕಟಿಸಿದೆ. ಈ ಯೋಜನೆಯಲ್ಲಿ ಹಲವಾರು ಟ್ರಸ್ಟ್‌ಗಳು, ಎನ್‌ಜಿಒಗಳು ಕೈಜೋಡಿಸಿದ್ದು, ಅಗತ್ಯವಿದ್ದವರಿಗೆ ರಕ್ತ ದೊರೆಯುವ ವ್ಯವಸ್ಥೆ ಇದೆ.
ಇವನ್ನೂ ನೋಡಿ
ನಡೆ ಕನ್ನಡ, ನುಡಿ ಕನ್ನಡ: ಆಗಲಿ ಕೀಬೋರ್ಡ್ ಕೂಡ ಕನ್ನಡ!
ಮಾಹಿತಿ ಮತ್ತು ತಂತ್ರಜ್ಞಾನದ ಕ್ಷೇತ್ರ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಕೌತುಕಗಳಲ್ಲೊಂದು. ಕೆಲವೇ ವರ್ಷಗಳ ಹಿಂದೆ ಅಂತರ್ಜಾಲದಲ್ಲಿ, ಸ್ಮಾರ್ಟ್ ಫೋನ್ಗಳಲ್ಲಿ ಕನ್ನಡ ಬರೆಯಲು ತ್ರಾಸ ಪಡುತ್ತಿರುವವರೆಲ್ಲರೂ ಇದೀಗ ಹುಡುಕಿ ಹುಡುಕಿ ಕನ್ನಡ ಟೈಪಿಂಗ್ ಟೂಲ್ಗಳನ್ನು,...