ಆ್ಯಪಲ್ ಐಫೋನ್ ಇರುವವರಿಗೆ ಆ್ಯಪಲ್ ಮ್ಯೂಸಿಕ್ ಸ್ಟೋರ್‌ನಲ್ಲಿ ಬೇಕುಬೇಕಾದ ಹಾಡುಗಳು ಸಿಗುತ್ತವೆಂದು ಗೊತ್ತಿದೆ. ಇದೀಗ ಮ್ಯೂಸಿಕ್ ಬಾಟ್ ಅನ್ನು ಆ್ಯಪಲ್ ಕಂಪನಿಯು ಪರಿಚಯಿಸಿದೆ. ಅಂದರೆ, ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್ ಅಂತ ಸರ್ಚ್ ಮಾಡಿದಾಗ ಸಿಗುವ ಫ್ರೆಂಡ್ ಇದು. ಅದಕ್ಕೆ ಕ್ಲಿಕ್ ಮಾಡಿದಾಗ, ಯಾವ ಮ್ಯೂಸಿಕ್ ಬೇಕೂಂತ ಮೆಸೆಂಜರ್‌ನಲ್ಲೇ ಕೇಳುತ್ತದೆ. ನೀವು, ಯೇಸುದಾಸ್ ಅಂತ ಟೈಪ್ ಮಾಡಿದರೆ, ಯೇಸುದಾಸ್ ಹಾಡಿದ ಹಾಡುಗಳ ಪಟ್ಟಿಯನ್ನೇ ನಿಮ್ಮ ಮುಂದಿಡುತ್ತದೆ. ಅದರ ಮೇಲೆ ಕ್ಲಿಕ್ ಮಾಡಬಹುದು, ಅದನ್ನು ಅಲ್ಲಿಂದಲೇ ಸ್ನೇಹಿತರೊಂದಿಗೆ ಶೇರ್ ಮಾಡಬಹುದು. ಆ್ಯಪಲ್ ಮ್ಯೂಸಿಕ್ ಚಂದಾದಾರರಲ್ಲದಿದ್ದವರಿಗೆ ಕೇವಲ 30 ಸೆಕೆಂಡುಗಳ ಕಾಲ ಉಚಿತವಾಗಿ ಹಾಡು ಕೇಳಲು ಮಾತ್ರ ಸಾಧ್ಯ. ಇದು ಆ್ಯಪಲ್ ಐಫೋನ್ ಅಲ್ಲದೆ, ಆಂಡ್ರಾಯ್ಡ್ ಫೋನ್‌ನಲ್ಲಿಯೂ ಲಭ್ಯವಿದೆ.
ಇವನ್ನೂ ನೋಡಿ
GramaOne (ಗ್ರಾಮ ಒನ್): ಗ್ರಾಮೀಣ ಮಟ್ಟಕ್ಕೂ ವಿಸ್ತರಿಸುತ್ತಿದೆ ತಂತ್ರಜ್ಞಾನ
ಸರಕಾರಿ ಸವಲತ್ತು ಪಡೆಯುವ ಏಕ ಗವಾಕ್ಷಿಇದು ತಂತ್ರಜ್ಞಾನವು ಗ್ರಾಮೀಣ ಪ್ರದೇಶದ ನಾಗರಿಕರನ್ನೂ ತಲುಪುವ ಬಗೆ. ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸುಲಭವಾಗಿ ಪಡೆಯುವಲ್ಲಿ ಅನುಕೂಲ ಮಾಡಿಕೊಡುವ 'ಬೆಂಗಳೂರು ಒನ್', 'ಕರ್ನಾಟಕ ಒನ್'...