ತೀರಾ ಇತ್ತೀಚಿನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಎಸ್ಸೆಮ್ಮೆಸ್ (Messages) ಆ್ಯಪ್‌ನಲ್ಲಿ ಹೆಚ್ಚಿನವರು ಹೊಸದೊಂದು ಆಯ್ಕೆಯನ್ನು ನೋಡಿರಬಹುದು. ವಾಟ್ಸ್ಆ್ಯಪ್ ಸಂದೇಶಗಳನ್ನು ಯಾವ ರೀತಿ ನಾವು ಕಂಪ್ಯೂಟರಿಗೆ ಸಂಪರ್ಕಿಸಿ, ಬ್ರೌಸರಿನಲ್ಲಿ ನೋಡಬಹುದೋ, ಅದೇ ರೀತಿ ಈ ಎಸ್ಸೆಮ್ಮೆಸ್ ಸಂದೇಶಗಳನ್ನೂ ನೋಡಬಹುದು. ಮತ್ತು ಕಂಪ್ಯೂಟರಿನಲ್ಲೇ ಸಂದೇಶಗಳನ್ನು ಟೈಪ್ ಮಾಡಿ ಕಳುಹಿಸಬಹುದು ಅಥವಾ ಓದಬಹುದು. ಇದಕ್ಕೆ ನೀವು ಮಾಡಬೇಕಾದುದಿಷ್ಟೇ. ನಿಮ್ಮ ಮೆಸೇಜ್ ಆ್ಯಪ್‌ನ ಸೆಟ್ಟಿಂಗ್ಸ್‌ಗೆ ಹೋಗಿ, Messages For Web ಅಂತ ಕ್ಲಿಕ್ ಮಾಡಿ, ಕಂಪ್ಯೂಟರಿನ ಬ್ರೌಸರಿನಲ್ಲಿ https://messages.android.com ಎಂಬ ತಾಣಕ್ಕೆ ಹೋಗಿ, ಅದರ ಎದುರು ಮೊಬೈಲ್ ಹಿಡಿದು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ. ಪರಸ್ಪರ ಸಂಪರ್ಕವಾಗುತ್ತದೆ. ಕಂಪ್ಯೂಟರಿನಿಂದಲೇ ಸಂದೇಶಗಳನ್ನು ನಿಭಾಯಿಸಬಹುದು. ನೆನಪಿಡಿ, ಇದಕ್ಕೆ ಇಂಟರ್ನೆಟ್ ಸಂಪರ್ಕ ಆನ್ ಇರಬೇಕಾಗುತ್ತದೆ.
ಇವನ್ನೂ ನೋಡಿ
ಸರಕಾರಿ ಮಾನ್ಯತೆ ಪಡೆದ ಯುನಿಕೋಡ್, ಏನಿದು?
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-12 (ನವೆಂಬರ್ 12, 2012) ಹಲವಾರು ವರ್ಷಗಳ ನಿರೀಕ್ಷೆಯ ಬಳಿಕ ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ಸರಕಾರವು Unicode ಶಿಷ್ಟತೆಗೆ ಮಾನ್ಯತೆ ನೀಡಿತು ಎಂಬ ವರದಿಗಳನ್ನು ನೀವು ಇತ್ತೀಚೆಗಷ್ಟೇ ಓದಿದ್ದೀರಿ. ಏನಿದು...



