ತೀರಾ ಇತ್ತೀಚಿನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಎಸ್ಸೆಮ್ಮೆಸ್ (Messages) ಆ್ಯಪ್‌ನಲ್ಲಿ ಹೆಚ್ಚಿನವರು ಹೊಸದೊಂದು ಆಯ್ಕೆಯನ್ನು ನೋಡಿರಬಹುದು. ವಾಟ್ಸ್ಆ್ಯಪ್ ಸಂದೇಶಗಳನ್ನು ಯಾವ ರೀತಿ ನಾವು ಕಂಪ್ಯೂಟರಿಗೆ ಸಂಪರ್ಕಿಸಿ, ಬ್ರೌಸರಿನಲ್ಲಿ ನೋಡಬಹುದೋ, ಅದೇ ರೀತಿ ಈ ಎಸ್ಸೆಮ್ಮೆಸ್ ಸಂದೇಶಗಳನ್ನೂ ನೋಡಬಹುದು. ಮತ್ತು ಕಂಪ್ಯೂಟರಿನಲ್ಲೇ ಸಂದೇಶಗಳನ್ನು ಟೈಪ್ ಮಾಡಿ ಕಳುಹಿಸಬಹುದು ಅಥವಾ ಓದಬಹುದು. ಇದಕ್ಕೆ ನೀವು ಮಾಡಬೇಕಾದುದಿಷ್ಟೇ. ನಿಮ್ಮ ಮೆಸೇಜ್ ಆ್ಯಪ್‌ನ ಸೆಟ್ಟಿಂಗ್ಸ್‌ಗೆ ಹೋಗಿ, Messages For Web ಅಂತ ಕ್ಲಿಕ್ ಮಾಡಿ, ಕಂಪ್ಯೂಟರಿನ ಬ್ರೌಸರಿನಲ್ಲಿ https://messages.android.com ಎಂಬ ತಾಣಕ್ಕೆ ಹೋಗಿ, ಅದರ ಎದುರು ಮೊಬೈಲ್ ಹಿಡಿದು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ. ಪರಸ್ಪರ ಸಂಪರ್ಕವಾಗುತ್ತದೆ. ಕಂಪ್ಯೂಟರಿನಿಂದಲೇ ಸಂದೇಶಗಳನ್ನು ನಿಭಾಯಿಸಬಹುದು. ನೆನಪಿಡಿ, ಇದಕ್ಕೆ ಇಂಟರ್ನೆಟ್ ಸಂಪರ್ಕ ಆನ್ ಇರಬೇಕಾಗುತ್ತದೆ.
ಇವನ್ನೂ ನೋಡಿ
ಟೆಕ್ ಟಾನಿಕ್: ಸ್ಕ್ರೀನ್ಶಾಟ್ಗೆ ಟೂಲ್
ಕಂಪ್ಯೂಟರುಗಳಲ್ಲಿ ಕೆಲಸ ಮಾಡುತ್ತಿರುವಾಗ, ಯಾವುದೇ ವಿಷಯದ ಸ್ಕ್ರೀನ್ ಶಾಟ್ (ಸ್ಕ್ರೀನ್ನಲ್ಲಿ ಕಾಣಿಸುವ ವಿಷಯದ ಚಿತ್ರ) ಬೇಕಿದ್ದರೆ, ಕೀಬೋರ್ಡ್ನಲ್ಲಿ PrntScr ಎಂಬ ಬಟನ್ ಒತ್ತಿ, ಅದನ್ನು ಯಾವುದೇ ಫೋಟೋ ಎಡಿಟಿಂಗ್ ಟೂಲ್ಗೆ (ಉದಾ. ಪೇಂಟ್ಬ್ರಶ್)...


