ಇನ್ನು ಮುಂದೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂವಹನ ನಡೆಸಲು ಫೇಸ್‌ಬುಕ್ ತಾಣಕ್ಕೇ ಲಾಗಿನ್ ಆಗಬೇಕಾಗಿಲ್ಲ ಅಥವಾ ಸ್ಮಾರ್ಟ್ ಫೋನನ್ನೇ ನೆಚ್ಚಿಕೊಳ್ಳಬೇಕಾಗಿಲ್ಲ. ಈ ಮೆಸೆಂಜರ್‌ನ ವೆಬ್ ಆವೃತ್ತಿಯನ್ನು ಫೇಸ್‌ಬುಕ್ ಬಿಡುಗಡೆಗೊಳಿಸಿದೆ. ಅಂದರೆ, ಕಂಪ್ಯೂಟರಿನಲ್ಲಿ ಯಾವುದಾದರೂ ಬ್ರೌಸರ್ ಮೂಲಕವೇ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗುವ ಮೂಲಕ ನೀವು ಚಾಟ್ ನಡೆಸಬಹುದಾಗಿದೆ. Messenger.com ಎಂದು ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಲಾಗಿನ್ ಐಡಿ, ಪಾಸ್‌ವರ್ಡ್ ಮೂಲಕ ಒಳ ಹೊಕ್ಕರೆ ಸಾಕು. ಕಂಪ್ಯೂಟರಿನಿಂದಲೇ ಫೇಸ್‌ಬುಕ್ ಮಾತುಕತೆ ಮುಂದುವರಿಸಬಹುದು.
ಇವನ್ನೂ ನೋಡಿ
ಕನ್ನಡ ಕನ್ನಡ ಅಂತ ಹೋರಾಡಬೇಕಿರುವುದೇಕೆ?
ಹೌದು... 'ಕನ್ನಡ ಉಳಿಸಿ, ಕನ್ನಡ ಉಳಿಸೀ ಅಂತ ಕೂಗಾಡೋದ್ಯಾಕೆ ಸುಮ್ಮನೆ, ಅವರಿಗೆ ಸುಮ್ಮನಿರಲಾಗುವುದಿಲ್ಲವೇ' ಅಂತ ಹಲವರು ಹೇಳಿಕೊಳ್ಳುವುದನ್ನು ಕೇಳುತ್ತಾ ಬಂದಿದ್ದೇವೆ. ಕನ್ನಡ ಹೋರಾಟಗಾರರು ಅಲ್ಲಲ್ಲಿ ಗಾಜು ಪುಡಿ ಮಾಡಿದರು, ದಾಂಧಲೆ ಮಾಡಿದರು ಎಂಬೆಲ್ಲಾ...



