ಗೂಗಲ್‌ನ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ಕೆಲವೊಮ್ಮೆ ಬ್ರೌಸರ್‌ನ ತೆರೆದ ಟ್ಯಾಬ್‌ನ ಮೇಲ್ಭಾಗದ ಬಲತುದಿಯಲ್ಲಿ (ಬ್ರೌಸರ್ ಮುಚ್ಚಲು ಇರುವ X ಗುರುತು ಪಕ್ಕದಲ್ಲಿ) ಮೈಕ್ ರೀತಿಯ ಐಕಾನ್ ಕಾಣಿಸಿಕೊಂಡಿದ್ದನ್ನು ನೋಡಿರಬಹುದು. ಇದರ ಕೆಲಸವೇನು ಮತ್ತು ಇದು ಕೆಲವೊಮ್ಮೆ ಮಾತ್ರ ಯಾಕಾಗಿ ಕಾಣಿಸಿಕೊಳ್ಳುತ್ತದೆ? ವೀಡಿಯೋ ಅಥವಾ ಆಡಿಯೋ ಪ್ಲೇ ಆಗುತ್ತಿರುವ ಟ್ಯಾಬ್‌ನಲ್ಲಿ ಮಾತ್ರವೇ ಈ ಐಕಾನ್ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡು (ಒಂದೊಂದರಲ್ಲಿ ಒಂದೊಂದು ವೆಬ್ ಪುಟ) ಕೆಲಸ ಮಾಡುತ್ತಾರೆ. ದಿಢೀರನೇ ಸದ್ದು ಕೇಳಿಸಿದಾಗ ಯಾವುದರಲ್ಲಿ ವೀಡಿಯೊ ಅಥವಾ ಆಡಿಯೊ ಪ್ಲೇ ಆಗುತ್ತದೆ ಎಂಬುದು ತಿಳಿಯುವುದಿಲ್ಲ. ಯಾವ ಟ್ಯಾಬ್‌ನಲ್ಲಿ ಸದ್ದು ಕೇಳಿಬರುತ್ತಿದೆ ಎಂಬುದನ್ನು ತಿಳಿಯುವುದಕ್ಕಾಗಿಯೇ ಈ ಐಕಾನ್ ಇದೆ.
ಇವನ್ನೂ ನೋಡಿ
Tax Refund ಹೆಸರಲ್ಲಿ ಬರುವ SMS, ಲಿಂಕ್ ಬಗ್ಗೆ ಎಚ್ಚರ!
ಆನ್ಲೈನ್ ಜಗತ್ತಿನಲ್ಲಿ ವಂಚನೆಗೂ ಟ್ರೆಂಡ್ ಎಂಬುದಿದೆ. ಈಗಿನ ಟ್ರೆಂಡ್ ಎಂದರೆ, ಇನ್ಕಂ ಟ್ಯಾಕ್ಸ್ ಹೆಸರಲ್ಲಿ ವಂಚನೆ! ಆದಾಯ ತೆರಿಗೆ ರಿಟರ್ನ್ಸ್ (ಕಳೆದ ಹಣಕಾಸು ವರ್ಷದಲ್ಲಿ ನಮ್ಮ ವೈಯಕ್ತಿಕ ಆದಾಯ, ಉಳಿತಾಯ ಮುಂತಾದವುಗಳ ಲೆಕ್ಕ ತೋರಿಸುವುದು)...