ಕಂಪ್ಯೂಟರಿನಲ್ಲಿ ಕ್ಯಾಲ್ಕುಲೇಟರ್ ಅಡಕವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅದನ್ನು Programmes ನಲ್ಲಿ Accessories ಎಂಬಲ್ಲಿ ಹುಡುಕಿ ಹೋಗುವುದು ಸ್ವಲ್ಪ ಸುತ್ತಿ ಬಳಸುವ ವಿಧಾನ. ಆದರೆ, ಕ್ಷಿಪ್ರವಾಗಿ ಕ್ಯಾಲ್ಕುಲೇಟರ್ ತೆರೆಯಬೇಕೆಂದರೆ ಏನು ಮಾಡಬಹುದು? ನಿಮ್ಮ ಕಂಪ್ಯೂಟರಿನಲ್ಲಿ Start ಬಟನ್ (ವಿಂಡೋಸ್ ಲೋಗೋ) ಇರುವಲ್ಲಿ Run ಅಂತ ಬರೆದಿರುವುದನ್ನು ಕ್ಲಿಕ್ ಮಾಡಿದರೆ ಅಥವಾ ಕೀಬೋರ್ಡ್‌ನ ವಿಂಡೋಸ್ ಬಟನ್ ಹಾಗೂ R ಒತ್ತಿದಾಗ ತೆರೆದುಕೊಳ್ಳುವ ಬಾಕ್ಸ್‌ನಲ್ಲಿ Calc ಅಂತ ಟೈಪ್ ಮಾಡಿ, ಎಂಟರ್ ಕೊಡಿ. ಕ್ಯಾಲ್ಕುಲೇಟರ್ ಓಪನ್ ಆಗಿಯೇಬಿಟ್ಟಿತು.
ಇವನ್ನೂ ನೋಡಿ
Samsung Galaxy Z Flip 4: ದೊಡ್ಡ ಸ್ಕ್ರೀನ್ ಮಡಚುವ ವಿಶಿಷ್ಟ ಫೋನ್
Samsung Galaxy Z Flip 4: ಬ್ಯಾಟರಿ ಸಾಮರ್ಥ್ಯ ಕೊಂಚ ಕಡಿಮೆಯಾಯಿತು ಅನ್ನಿಸಿದರೂ, ಸ್ಟೈಲ್ ಇಷ್ಟಪಡುವವರಿಗೆ, ಫ್ಲೆಕ್ಸ್ ಮೋಡ್ನಂತಹ ಅತ್ಯಾಧುನಿಕ ಸೌಕರ್ಯಗಳನ್ನು ಬಳಸುವ ತುಡಿತ ಇರುವವರಿಗೆ ಇದು ಇಷ್ಟವಾಗಬಹುದು.