ನೀವು ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್‌ಟಾಪ್ ಕಂಪ್ಯೂಟರಿನ ಬ್ರೌಸರಿನಲ್ಲಿ ಯೂಟ್ಯೂಬ್ ಅಥವಾ ಬೇರಾವುದೇ ಮೂಲದಿಂದ ವೀಡಿಯೋ ನೋಡುತ್ತಿರುವಾಗ, ಅಥವಾ ಯಾವುದೇ ವೆಬ್‌ಸೈಟ್ ವೀಕ್ಷಿಸುತ್ತಿರುವಾಗ, ದೊಡ್ಡದಾಗಿ, ಕಂಪ್ಯೂಟರಿನ ಇಡೀ ಪರದೆಯನ್ನು ಆವರಿಸುವಂತೆ ನೋಡಬೇಕೆಂದರೆ ಇದಕ್ಕೆ ಸುಲಭ ಶಾರ್ಟ್ ಕಟ್ ಇರುವುದು ಹೆಚ್ಚಿನವರಿಗೆ ಗೊತ್ತಿರಲಾರದು. F11 ಬಟನ್ ಒತ್ತಿದರಾಯಿತು. ಆ ಪುಟ ಬಿಟ್ಟು ಬೇರೇನೂ ಕಾಣದಂತೆ ಅದು ಸ್ಕ್ರೀನನ್ನು ಆವರಿಸಿರುತ್ತದೆ. ಪುನಃ ಹಿಂದಿನ ಸ್ಥಿತಿಗೆ ಮರಳಲು ಕೀಬೋರ್ಡ್‌ನಲ್ಲಿ ಪುನಃ F11 ಬಟನ್ ಅದುಮಿದರಾಯಿತು.
ಇವನ್ನೂ ನೋಡಿ
WhatsApp, Telegram ಕಂಪ್ಯೂಟರಲ್ಲೇ ನಿಭಾಯಿಸಲು ಒಪೆರಾ ಬ್ರೌಸರ್
ಕಂಪ್ಯೂಟರಲ್ಲಿ ಇಂಟರ್ನೆಟ್ ಪುಟಗಳನ್ನು ಜಾಲಾಡಲು ಬ್ರೌಸರ್ ಎಂಬ ತಂತ್ರಾಂಶ ಬೇಕಾಗುತ್ತದೆಯಲ್ಲವೇ? ಮೈಕ್ರೋಸಾಫ್ಟ್ನ ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯುಳ್ಳ ಕಂಪ್ಯೂಟರ್ ಬಳಸುತ್ತಿರುವವರಿಗೆ ಇಂಟರ್ನೆಟ್ ಎಕ್ಸ್ಪ್ಲೋರರ್ (ವಿಂಡೋಸ್ 10ರಲ್ಲಿ ವಿಂಡೋಸ್ ಎಡ್ಜ್) ಗೊತ್ತಿದೆ. ಇದು ವಿಂಡೋಸ್ ಪಿಸಿಗಳಲ್ಲಿ...