ನೀವು ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್‌ಟಾಪ್ ಕಂಪ್ಯೂಟರಿನ ಬ್ರೌಸರಿನಲ್ಲಿ ಯೂಟ್ಯೂಬ್ ಅಥವಾ ಬೇರಾವುದೇ ಮೂಲದಿಂದ ವೀಡಿಯೋ ನೋಡುತ್ತಿರುವಾಗ, ಅಥವಾ ಯಾವುದೇ ವೆಬ್‌ಸೈಟ್ ವೀಕ್ಷಿಸುತ್ತಿರುವಾಗ, ದೊಡ್ಡದಾಗಿ, ಕಂಪ್ಯೂಟರಿನ ಇಡೀ ಪರದೆಯನ್ನು ಆವರಿಸುವಂತೆ ನೋಡಬೇಕೆಂದರೆ ಇದಕ್ಕೆ ಸುಲಭ ಶಾರ್ಟ್ ಕಟ್ ಇರುವುದು ಹೆಚ್ಚಿನವರಿಗೆ ಗೊತ್ತಿರಲಾರದು. F11 ಬಟನ್ ಒತ್ತಿದರಾಯಿತು. ಆ ಪುಟ ಬಿಟ್ಟು ಬೇರೇನೂ ಕಾಣದಂತೆ ಅದು ಸ್ಕ್ರೀನನ್ನು ಆವರಿಸಿರುತ್ತದೆ. ಪುನಃ ಹಿಂದಿನ ಸ್ಥಿತಿಗೆ ಮರಳಲು ಕೀಬೋರ್ಡ್‌ನಲ್ಲಿ ಪುನಃ F11 ಬಟನ್ ಅದುಮಿದರಾಯಿತು.
ಇವನ್ನೂ ನೋಡಿ
ಅಸಲಿ ನಡುವೆ ನುಸುಳುವ ನಕಲಿ ಆ್ಯಪ್ಗಳು: ‘ಕಿಂಭೋ’ ನೀಡಿದ ಎಚ್ಚರಿಕೆ!
ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ಕಾಲದಲ್ಲಿ ಒಂದು ಸಂದೇಶವು ವಾಟ್ಸ್ಆ್ಯಪ್ ಗ್ರೂಪುಗಳ ಮೂಲಕ ಕಣ್ಣು ಮುಚ್ಚಿ ತೆರೆಯುವುದರೊಳಗೆ ಏನೇನೋ ರಾದ್ಧಾಂತವನ್ನು ಮಾಡಬಲ್ಲುದು. ಪ್ರಕೃತಿ ನಿಯಮದಂತೆ ಒಳ್ಳೆಯ ಸಂದೇಶಗಳು ಹರಡುವ ವೇಗಕ್ಕಿಂತ ತಪ್ಪು ಮತ್ತು...