ಐಫೋನ್ ಕಳೆದುಹೋಗಿದೆ, ಪೊಲೀಸರಿಗೆ ದೂರು ನೀಡಲು ಅದರ IMEI ನಂಬರ್ ಬೇಕೇ ಬೇಕು. ಆದರೆ ಬಿಲ್ ಕೂಡ ಇಲ್ಲ, ಫೋನ್‌ನ ಬಾಕ್ಸ್ ಕೂಡ ಇಟ್ಟುಕೊಂಡಿಲ್ಲ. ಏನು ಮಾಡಬೇಕು? ಐಫೋನ್‌ನ IMEI ನಂಬರ್ ಪತ್ತೆ ಹಚ್ಚಲು ಮತ್ತೊಂದು ಮಾರ್ಗವಿದೆ. ಅದೆಂದರೆ, ಐಫೋನ್ ಹೊಂದಿರುವವರು ಅದನ್ನು iTunes ಎಂಬ ಆ್ಯಪ್ ಸ್ಟೋರ್‌ಗೆ ಲಿಂಕ್ ಮಾಡಿದಾಗ ಅದು ತಾನಾಗಿ ಸಿಂಕ್ ಆಗಿರುತ್ತದೆ. ಅದರಲ್ಲಿ ಫೋನಿನ ಮಾಹಿತಿಯ ಬ್ಯಾಕಪ್ ಇರುತ್ತದೆ. IMEI ನಂಬರ್ ನೋಡಲು ಕಂಪ್ಯೂಟರಿನಲ್ಲಿ iTunes ವೆಬ್ ತಾಣಕ್ಕೆ ಲಾಗಿನ್ ಆಗಿ ಅದರಲ್ಲಿ Preferences -> Devices ಎಂಬಲ್ಲಿಂದ ಫೋನ್ ಬ್ಯಾಕಪ್ ಆಯ್ಕೆ ಮಾಡಿದರೆ, IMEI ನಂಬರ್ ಸಂದೇಶದ ವಿಂಡೋದಲ್ಲಿ ಕಾಣಿಸುತ್ತದೆ. ಆದರೂ, ಎಲ್ಲಾದರೂ ಒಂದುಕಡೆ ಅದನ್ನು ಬರೆದಿಟ್ಟುಕೊಳ್ಳುವುದು ಸೂಕ್ತ.
ಇವನ್ನೂ ನೋಡಿ
ಆಪಲ್ Vs ಸ್ಯಾಮ್ಸಂಗ್ : ಪಾಲುದಾರರ ಮಧ್ಯೆ ಪೇಟೆಂಟ್ ಸಂಘರ್ಷ
ಜಗತ್ತಿನ ಪ್ರಮುಖ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಾದ ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಡುವಿನ ಪೇಟೆಂಟ್ ಯುದ್ಧ ಇಂದು-ನಿನ್ನೆಯದಲ್ಲ. ಸ್ಯಾಮ್ಸಂಗ್ ಕಂಪನಿಯು ಯಾವಾಗ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಹಾಗೂ ಟ್ಯಾಬ್ಲೆಟ್ಗಳನ್ನು ತಯಾರಿಸಲು ಆರಂಭಿಸಿತೋ, ಆವಾಗಲೇ ಈ...

