ಪ್ರೀತಿ, ಪ್ರೇಮ, ವಾತ್ಸಲ್ಯ….!

6
880

rose.jpg

     ಹಾಂ… ಪ್ರೀತಿ ಪ್ರೇಮ ಅಂದ ತಕ್ಷಣ ಇಂದಿನ ಯುವಜನತೆಯನ್ನು, ವಿಶೇಷತಃ ಕಾಲೇಜು ವಿದ್ಯಾರ್ಥಿಗಳನ್ನು ಸಾಂಕ್ರಾಮಿಕವಾಗಿ ಆವರಿಸಿಕೊಂಡಿರುವ “ಯುಗಳ ಪ್ರೇಮ” ಮಾತ್ರವೇ ಅಂದುಕೊಂಡಿರಾ….

    ಸ್ವಲ್ಪ ನಿಲ್ಲಿ. ಅಲ್ಲೇ ನೀವು ಎಡವಿದ್ದು. ಖಂಡಿತವಾಗಿಯೂ ಎಡವಿದ್ದೀರಿ ತಾನೇ?
ಒಬ್ಬ ವ್ಯಕ್ತಿ ಹುಟ್ಟಿದಾರಭ್ಯ ಒಂದಿಲ್ಲೊಂದು ಪ್ರೀತಿ ಪ್ರೇಮದ ಕಡಲಲ್ಲಿ ಮಿಂದಿರುತ್ತಾನೆ. ಚಿಕ್ಕಂದಿನಲ್ಲಿ ವಿಶೇಷವಾಗಿ ಎಳೆ ಮಗುವಿರುವಾಗ ಕಂಡ ಕಂಡವರೆಲ್ಲರೂ ಆ ಮಗುವಿನ ಮೇಲೆ ಪ್ರೇಮದ ಧಾರೆ ಎರೆಯುವವರೇ. ಇನ್ನೊಂದೆಡೆ ಯಾವಾಗಲೂ ಮನೆಯಲ್ಲೇ ಇರುವ ಅಜ್ಜ, ಅಜ್ಜಿ, ತಂದೆ-ತಾಯಿಯರ ಪ್ರೇಮದ ಕಾಣಿಕೆಗೆ ಎಣೆಯಿದೆಯೇ?

    ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಮೆರಿಕ ಸಂಸ್ಕೃತಿ (ಇದಕ್ಕೂ ಜಾಗತೀಕರಣದ ಪ್ರಭಾವ ಎನ್ನೋಣವೇ?) ನಮ್ಮ ಕಾಲೇಜು ಕ್ಯಾಂಪಸ್ಸಿಗೆ ಆವರಿಸಿಕೊಂಡು ಯುವಜನತೆ ಅದರಲ್ಲೇ ಮೀಯುತ್ತಿರುತ್ತಾರೆ. ಇದಕ್ಕೆ ಪ್ರೇಮ ಎಂದೇ ಹೆಸರಿರಿಸಿ ಆ ಹೆಸರಿನ ಮೇಲೇ ಪೇಟೆಂಟ್ ಗಿಟ್ಟಿಸಿದ್ದಾರೆ!

    ಇದೇ ಕಾರಣಕ್ಕೆ, ತಾವು ಮಾಡುವ “ಲವ್” ಮಾತ್ರವೇ ಪ್ರೀತಿ-ಪ್ರೇಮ, ಉಳಿದವುಗಳಿಗೆ ಅದರದ್ದೇ ಆದ ಬ್ರ್ಯಾಂಡ್ ಹೆಸರುಗಳಿವೆ ಎಂದುಕೊಂಡು ಮಗುಮ್ಮಾಗಿರುವ ಯುವ ಜನತೆ, ವಾತ್ಸಲ್ಯ, ಮಮತೆ ಮುಂತಾದ ಸುಂದರ ಶಬ್ದಗಳಿಲ್ಲವೇ? ಅದನ್ನು ಬಳಸಿಕೊಳ್ಳಲು ಅವರಿಗೇನು ದಾಡಿ? ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಎಂದು ಏನೂ ಆಗದಂತೆ ತಮ್ಮ ಪಾಡಿಗೆ ಪ್ರೇಮಿಸುವುದನ್ನು ಮುಂದುವರಿಸುತ್ತಿರುತ್ತಾರೆ!

    ತಪ್ಪಲ್ಲ ಬಿಡಿ. ಪ್ರಾಯದ ದೋಷ ಎಂದು ಹಿರಿಯರು ಹೇಳಿದ್ದನ್ನು ಕೇಳಿದ್ದೀರಲ್ಲ!
ಅಂದರೆ ಪ್ರೀತಿ-ಪ್ರೇಮ ಎಂದು ಬೆರೆಸಿ ಹೇಳಿದರೆ ಅದು ಯುವಕ-ಯುವತಿಯರಿಗೆ ಸಂಬಂಧಿಸಿದ್ದು, ಪ್ರೀತಿ-ವಾತ್ಸಲ್ಯ ಎಂದು ಸೇರಿಸಿ ಹೇಳಿದರೆ ಅದು ನಿಷ್ಕಾಮ ಪ್ರೀತಿಗೆ ಸಂಬಂಧಿಸಿದ್ದು ಎಂಬ ಅಲಿಖಿತ ನಿಯಮ ಇಂದು ಎಲ್ಲೆಡೆ ಪಾಲನೆಯಾಗುತ್ತಿರುವುದು ಸುಳ್ಳಲ್ಲ.

    ಇಲ್ಲವಾದಲ್ಲಿ, ಪ್ರೀತಿ-ಪ್ರೇಮ ಎಂಬ ಪದ ಕೇಳಿದ ತಕ್ಷಣ, ಅದು ಶ್ಲೀಲವಲ್ಲದ ಪದ ಎಂದು ಹೆಚ್ಚಿನ ಹಿರಿಯರು ಮುೂಗು ಮುರಿಯುವುದೇಕೆ? ಇನ್ನು ಕೆಲವರಿಗೆ ಪ್ರೀತಿ-ವಾತ್ಸಲ್ಯ ಪದವೇ ಶ್ಲೀಲ ಎಂಬ ಮನೋಭಾವ ಏಕೆ?

    ಪ್ರೀತಿ ಎಂಬ ಪದ ತನ್ನ ಪಾವಿತ್ರ್ಯವನ್ನು ಇನ್ನೂ ಉಳಿಸಿಕೊಂಡಿದೆ, ಪ್ರೇಮ ಎಂಬ ಪದ ಪವಿತ್ರತೆ ಕಳೆದುಕೊಂಡಿದೆ ಎಂಬ ಅಭಿಪ್ರಾಯ ಹುಟ್ಟಿಕೊಂಡಿದ್ದೇಕೆ? ಹೋಗಲಿ.. ಬಿಸಿರಕ್ತದ “ಕಾಲೇಜಿಗ”ರ ಪ್ರೀತಿ-ಪ್ರೇಮ ಪವಿತ್ರವಲ್ಲ ಎಂಬ ಭಾವನೆಯೇಕೆ? ಈ ಭಾವನೆ ಬರಲು ಕಾರಣವಾದ ವಿಷಯಗಳ್ಯಾವುವು? ಎಂಬ ಬಗ್ಗೆ ಒಂದಿಷ್ಟು ಚರ್ಚೆಯಾಗಲಿ…

    ನಿಮಗೇನನಿಸುತ್ತದೆ?
    ಇಲ್ಲೇ ಪಕ್ಕದಲ್ಲಿ ಒಂದು ಕಾಮೆಂಟ್ ಕೊಟ್ಟುಬಿಡಿ ನೋಡೋಣ….!!!

6 COMMENTS

  1. yes avinash u r right adre ivathu preethi, prema onde alla ella sambandagalu artha kalkoltha idave avugala bagge kuda nimmanthavaru gamana harisbeku annode nanna aase

    • ಕವನ ಅವರೆ, ಹೌದೇ ಹೌದು. ಬದುಕಿನ ಬೆಂಗಾಡಿನಲ್ಲಿ ಯಾವಾಗ ನೋಡಿದರೂ ಬ್ಯುಸಿಯಾಗಿಬಿಡುತ್ತಿದ್ದೇವೆ. ಸಂಬಂಧಗಳು ದೂರ ಹೋಗುತ್ತಿವೆ. ಮಾನವಸಹಜವಾದ ಭಾವನೆಗಳಿಗೆ ಬೆಲೆಯಿಲ್ಲದಂತಾಗಿದೆ.
      ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು. ಅದಿರ್ಲಿ, ನಮ್ಮಂಥವರು ಮಾತ್ರ ಗಮನ ಹರಿಸಬೇಕು ಅಂದ್ರಲ್ಲಾ… ಸ್ವಲ್ಪ ಅರ್ಥ ಆಗಿಲ್ಲ 😉

LEAVE A REPLY

Please enter your comment!
Please enter your name here