ದಕ್ಷಿಣೆ
ಆತ ನಗ ತಾರದಿದ್ದರೆ
ಆಕೆ ನಗಲಾರಳು!
ಆತ ನೀಡದಿದ್ದರೆ ನಗದು
ಈಕೆಯ ಮುಖವೆಂದಿಗೂ ನಗದು!
ಆತನ ಬಳಿ ಇಲ್ಲದಿದ್ದರೆ ನಗದು
ನಂಬಿ ಬಂದವಳ ಮುಖಾರವಿಂದವೂ ನಗದು
ವರದಕ್ಷಿಣೆ
ಈಕೆ ನಗ ತಾರದಿದ್ದರೆ
ಆತ ನಗಲಾರನು!
ಈಕೆ ನಗದು ತಾರದಿದ್ದರೆ
ಆತನ ಮುಖವೆಂದಿಗೂ ನಗದು!
ಆಕೆಯ ಕೈಗಳಲ್ಲಿ ಇಲ್ಲದಿರೆ ನಗದು
ಅತ್ತೆಯ ವದನವೆಂದಿಗೂ ನಗದು!
(ತೋಚಿದ್ದು ಗೀಚಿದ್ದು!)
ಸರ್,
ನಗದು, ನಗುವಿನ ಬಗ್ಗೆ ಸೊಗಸಾದ ಕವನ..ದಕ್ಷಣೆ..ವರದಕ್ಷಣೆ ಬಗೆಗೂ ಚೆಂದದ ಸಾಲುಗಳು….
ಧನ್ಯವಾದಗಳು…
ಶಿವು
ಧನ್ಯವಾದ.
ಅವಿನಾಶ್
ದಕ್ಷಿಣೆ-ವರದಕ್ಷಿಣೆ ಚೆನ್ನಾಗಿದೆ. ಕಟುವಾಸ್ತವ.
ಪರಾಂಜಪೆಯವರೆ,
ಅಭಿಪ್ರಾಯ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ಬಹುಶಃ ಇಂಥದ್ದೊಂದು ಕಾಲ ಹೋಗಿದೆ ಅಂದ್ಕೋತೀನಿ.
ಹ್ಹೆ.. ಹ್ಹೆ.. 🙂 ತುಂಬಾ ಚೆನ್ನಾಗಿವೆ ಕಣ್ರೀ!
aaha ….very well put. sakhattaagide !
ಪ್ರದೀಪ್,
ತುಂಬಾ ಥ್ಯಾಂಕ್ಸ್,
ಲಕ್ಷ್ಮಿ,
ನಿಮಗೂ ಧನ್ಯವಾದ
ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆಯಿರ್ಲಿ.