ಫೋನ್ ಬಂದ್ರೆ ನಿಮಗ್ಯಾಕೆ ಚಿಂತೆ? :)

2
437

ಎಲ್ಲೋ ಕೇಳಿದೆ. ಹಂಚಿಕೊಳ್ಳಬೇಕೆನಿಸಿತು. ಓದಿ ಎಂಜಾಯ್ ಮಾಡಿ.

ವೈದ್ಯರ ಮನೆಯ ಫೋನು ಒಂದೇ ಸಮನೆ ರಿಂಗ್ ಆಗತೊಡಗಿತು. ಆಗಷ್ಟೇ ಮನೆಗೆ ಮರಳಿದ್ದ ವೈದ್ಯರು ತಕ್ಷಣವೇ ಓಡಿ ಬಂದು ಹಲೋ ಎಂದರು.
“ಹಲೋ”… ಅತ್ತಲಿಂದ ಗಂಡು ದನಿ.

“ಯಾಕೆ ಮೊಬೈಲ್ ಕೂಡ ಎತ್ತಲ್ಲ?… ಇಲ್ಲಿ ಈಗಲೇ ಬಾರದಿದ್ರೆ ಸತ್ತೇ ಹೋಗ್ತೀನಿ… Please come immediately” ಅಂತ ಜೋರು ಮಾಡಿತು.
ದಡಬಡಾಯಿಸಿದ ವೈದ್ಯರು ಹೊರಡುವುದನ್ನು ಕಂಡ ಮಗಳು,

“ಅಪ್ಪಾ… ಎಲ್ಲಿಗೆ ಹೋಗ್ತೀರಿ? ಈಗಷ್ಟೇ ಆಸ್ಪತ್ರೆಯಿಂದ ಬಂದ್ರಿ… ರೆಸ್ಟ್ ತಗೊಳಿ”

ವೈದ್ಯ: “ಇಲ್ಲ ಕಣೇ. ಅವನ್ಯಾವನೋ ಫೋನ್ ಮಾಡಿ, ಮೊಬೈಲ್ ಕೂಡ ಯಾಕೆ ಎತ್ತಲ್ಲ, ಈಗ್ಲೇ ಬಾರದಿದ್ರೆ ಪ್ರಾಣ ಹೋಗುತ್ತೆ ಅಂತ ಹೇಳ್ದ. ಹೋಗ್ಲೇಬೇಕು”.

ಮಗಳು: “ಓಹ್ ಅಪ್ಪಾ… ಅದಾ… ಆ ಫೋನ್ ನಿಮ್ಗಲ್ಲ, ನಂಗೆ”!

2 COMMENTS

LEAVE A REPLY

Please enter your comment!
Please enter your name here