ಸ್ಮಾರ್ಟ್‌ಫೋನ್ ಖರೀದಿಸುವಾಗ ಹೆಚ್ಚಿನವರು ಅದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಗಮನ ಹರಿಸುತ್ತಾರೆ. ಆದರೆ, ಬೇರೆಲ್ಲಾ ಒಳ್ಳೆಯ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿಯದ್ದೇ ಒಂದು ಸಮಸ್ಯೆ, ಉಳಿದೆಲ್ಲವೂ ಅದ್ಭುತವಾಗಿದೆ ಅಂತ ಅನ್ನಿಸಿದ್ದಿದೆಯೇ? ಕೇವಲ ಅದೊಂದು ವಿಚಾರಕ್ಕಾಗಿ ಮಾತ್ರ ಈ ಫೋನ್ ಖರೀದಿಸಲು ಹಿಂದೇಟು ಹಾಕಿದ್ದೀರಾ? ಒಂದು ಸರಳ ಪರಿಹಾರವೆಂದರೆ, ಬ್ಯಾಟರಿ ಬ್ಯಾಂಕ್ ಅಥವಾ ಪೋರ್ಟೆಬಲ್ ಬ್ಯಾಟರಿಯನ್ನು ಪ್ರತ್ಯೇಕವಾಗಿ ಖರೀದಿಸುವುದು. 10ಸಾವಿರ mAh ಸಾಮರ್ಥ್ಯದ ಬ್ಯಾಟರಿ ಬ್ಯಾಂಕ್ ಖರೀದಿಸಿದರೆ, ಬೇಕಾದಾಗಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಡಿಜಿಟಲ್ ಕ್ಯಾಮರಾದ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.
ಇವನ್ನೂ ನೋಡಿ
ಅಂತರ್ಜಾಲದಲ್ಲಿರುವುದೆಲ್ಲವೂ ಹಾಲಲ್ಲ,: ಫಾರ್ವರ್ಡ್ಗೆ ಮುನ್ನ ಪರಾಮರ್ಶಿಸಿ
ನಾವು ನಿಯಂತ್ರಿಸಬೇಕಾದ ಮೊಬೈಲ್ ಫೋನ್ ಇಂದು ನಮ್ಮನ್ನೇ ನಿಯಂತ್ರಿಸುತ್ತಿದೆ. ತಂತ್ರಜ್ಞಾನವೊಂದರ ಬಳಕೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದಕ್ಕಿದು ಸಾಕ್ಷಿ. ಗೇಮ್ಸ್, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿರುವುದು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು, ತಮ್ಮಷ್ಟಕ್ಕೆ...