ಯಾವುದಾದರೂ ಜಾಹೀರಾತುಗಳು ತಪ್ಪು ದಾರಿಗೆ ಎಳೆಯುತ್ತಿವೆಯೇ? ಅಂತಹಾ ಜಾಹೀರಾತುಗಳನ್ನು ನಂಬಿ ಕೈಸುಟ್ಟುಕೊಂಡಿದ್ದೀರೇ? ಎಲ್ಲ ದಾಖಲೆಗಳೊಂದಿಗೆ ನೀವು ನೇರವಾಗಿ ಸರಕಾರಕ್ಕೆ ದೂರು ಸಲ್ಲಿಸಬಹುದು. ಇದಕ್ಕಾಗಿಯೇ ಭಾರತ ಸರಕಾರವು http://www.gama.gov.in/ ಎಂಬ ವೆಬ್ ತಾಣವನ್ನು ಆರಂಭಿಸಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಇದನ್ನು ನೋಡಿಕೊಳ್ಳುತ್ತಿದೆ. ಇಲ್ಲಿ ನಿಮ್ಮ ದೂರನ್ನು ದಾಖಲೆ ಸಮೇತ ಸಲ್ಲಿಸಿದರೆ, ಸರಕಾರ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತದೆ. ಈ ಪೋರ್ಟಲ್ ಹೆಸರು GAMA ಅಂತ. ಅಂದರೆ ಗ್ರೀವೆನ್ಸಸ್ ಅಗೇನ್‌ಸ್ಟ್ ಮಿಸ್‌ಲೀಡಿಂಗ್ ಅಡ್ವರ್ಟೈಸ್‌ಮೆಂಟ್ಸ್ (ದಾರಿ ತಪ್ಪಿಸುವ ಜಾಹೀರಾತುಗಳ ಕುಂದುಕೊರತೆ ನಿವಾರಣೆ) ಎಂದರ್ಥ.
ಇವನ್ನೂ ನೋಡಿ
ಪುಸ್ತಕ, ಪೋಸ್ಟರ್, ಆಮಂತ್ರಣ ವಿನ್ಯಾಸಕ್ಕೂ ಲಭ್ಯವಿದೆ Unicode ಬೆಂಬಲಿತ ಅಕ್ಷರಶೈಲಿ ವೈವಿಧ್ಯ
ವೈವಿಧ್ಯಮಯ ವಿನ್ಯಾಸಕ್ಕಾಗಿ ಕನ್ನಡ Unicode ಬೆಂಬಲಿಸುವ ಸಾಕಷ್ಟು ಕನ್ನಡ ಫಾಂಟುಗಳು ಲಭ್ಯ ಇವೆ.