ನೀವು ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್‌ಟಾಪ್ ಕಂಪ್ಯೂಟರಿನ ಬ್ರೌಸರಿನಲ್ಲಿ ಯೂಟ್ಯೂಬ್ ಅಥವಾ ಬೇರಾವುದೇ ಮೂಲದಿಂದ ವೀಡಿಯೋ ನೋಡುತ್ತಿರುವಾಗ, ಅಥವಾ ಯಾವುದೇ ವೆಬ್‌ಸೈಟ್ ವೀಕ್ಷಿಸುತ್ತಿರುವಾಗ, ದೊಡ್ಡದಾಗಿ, ಕಂಪ್ಯೂಟರಿನ ಇಡೀ ಪರದೆಯನ್ನು ಆವರಿಸುವಂತೆ ನೋಡಬೇಕೆಂದರೆ ಇದಕ್ಕೆ ಸುಲಭ ಶಾರ್ಟ್ ಕಟ್ ಇರುವುದು ಹೆಚ್ಚಿನವರಿಗೆ ಗೊತ್ತಿರಲಾರದು. F11 ಬಟನ್ ಒತ್ತಿದರಾಯಿತು. ಆ ಪುಟ ಬಿಟ್ಟು ಬೇರೇನೂ ಕಾಣದಂತೆ ಅದು ಸ್ಕ್ರೀನನ್ನು ಆವರಿಸಿರುತ್ತದೆ. ಪುನಃ ಹಿಂದಿನ ಸ್ಥಿತಿಗೆ ಮರಳಲು ಕೀಬೋರ್ಡ್‌ನಲ್ಲಿ ಪುನಃ F11 ಬಟನ್ ಅದುಮಿದರಾಯಿತು.
ಇವನ್ನೂ ನೋಡಿ
ಕನ್ನಡ ಅಸ್ಮಿತೆ: ಐಫೋನ್ಗೂ ಬಂತು ಕನ್ನಡದ ಕೀಲಿಮಣೆ
ಐಫೋನ್ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಇಲ್ಲವೆಂಬುದು ಆ್ಯಪಲ್-ಪ್ರಿಯರ ಬಹುಕಾಲದ ಕೊರಗು. ಆ ಕನಸು ಈಗ ನನಸಾಗಿದೆ. ಆ್ಯಪಲ್ ಕಂಪನಿಯು ಬುಧವಾರ ಭಾರತೀಯ ಐಫೋನ್ಗಳಿಗೆ ಅದರ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 11...


