ಆಂಡ್ರಾಯ್ಡ್ ಬಳಸಿದವರಿಗೆ ಆ್ಯಪಲ್ ಐಫೋನ್ ಬಳಕೆ ತುಸು ಗೊಂದಲಕಾರಿಯೇ. ಅದರಲ್ಲಿನ ಕೆಲವೊಂದು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಕಷ್ಟ. ಉದಾಹರಣೆಗೆ, ಐಫೋನ್‌ನಲ್ಲಿ ಯಾವುದೇ ಹಾಡು ಅಥವಾ ಮಾತನ್ನು ರೆಕಾರ್ಡ್ ಮಾಡುವ, ಆಂಡ್ರಾಯ್ಡ್‌ನ ವಾಯ್ಸ್ ರೆಕಾರ್ಡರ್‌ನಂತಾ ವೈಶಿಷ್ಟ್ಯ ಎಲ್ಲಿ ಅಂತ ಹಲವರು ನನ್ನ ಬಳಿ ಕೇಳಿದ್ದಾರೆ. ಹೀಗಾಗಿ ಐಫೋನ್ ಬಳಕೆದಾರರಿಗಾಗಿ ಈ ಮಾಹಿತಿ. ಫೋನ್‌ನಲ್ಲಿ ಆ್ಯಪ್‌ಗಳ ಪಟ್ಟಿ ನೋಡಿದರೆ, ಅಲ್ಲಿ ವಾಯ್ಸ್ ಮೆಮೋ ಎಂಬ ಆ್ಯಪ್ ಇರುತ್ತದೆ. ಅವರ ಗೊಂದಲಕ್ಕೆ ಕಾರಣವಾಗಿರುವುದು ಈ ಆ್ಯಪ್‌ನ ಹೆಸರು. ವಾಯ್ಸ್ ಮೆಮೋ ಬಳಸಿ ಯಾವುದೇ ಹಾಡನ್ನು ಅಥವಾ ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳಬಹುದು. ಆ್ಯಪ್ ಓಪನ್ ಮಾಡಿ, ಕೆಂಪು ಬಟನ್ ಒತ್ತಿದಾಗ ರೆಕಾರ್ಡಿಂಗ್ ಶುರುವಾಗುತ್ತದೆ, ಪುನಃ ಒತ್ತಿದಾಗ ಸ್ಟಾಪ್ ಆಗುತ್ತದೆ. ಸೇವ್ ಮಾಡುವಾಗ, ಈ ಆಡಿಯೋ ಕ್ಲಿಪ್ ಅನ್ನು ಟ್ರಿಮ್ (ಕಟ್) ಮಾಡುವ ವೈಶಿಷ್ಟ್ಯವೂ ಇದರಲ್ಲಿದೆ.
ಇವನ್ನೂ ನೋಡಿ
ಕಾರ್ಗಿಲ್ ವಿಜಯಕ್ಕೆ 12 ವರ್ಷ: ಯೋಧರಿಗಿದೋ ಸಲಾಂ!
ಹನ್ನೆರಡು ವರ್ಷಗಳ ಹಿಂದೆ, ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದಾರೆ. ಅಂಥಾ...