ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡಿಗರಿಗೆ ಸಿಹಿ ಸುದ್ದಿ.
ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಇಂಟರ್ನೆಟ್ ದೈತ್ಯ ಸಂಸ್ಥೆ ಯಾಹೂ! ಇಂಡಿಯಾ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಯಾಹೂ! ಮೆಸೆಂಜರ್‌ನ 8.0 ಆವೃತ್ತಿಯಲ್ಲಿ ಇನ್ನು ಮುಂದೆ ಪ್ಲಗ್-ಇನ್ ಸಹಾಯ ಪಡೆದು ಕನ್ನಡದಲ್ಲೇ ಚಾಟ್ ಮಾಡಬಹುದಾಗಿದೆ.
ಇದುವರೆಗೆ ಹಿಂದಿ, ಮರಾಠಿ, ತೆಲುಗು ಮುಂತಾದ ಭಾಷೆಗಳಲ್ಲಿ ಈ ಅವಕಾಶ ಇತ್ತು. ಇದು ಸುವರ್ಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಕನ್ನಡಿಗರಿಗೆ ಯಾಹೂ! ಕೊಡುಗೆ.
ಪರ ಊರಿನಲ್ಲಿರುವ ಕನ್ನಡಿಗರಿಗೆ ತಮ್ಮವರ ಜತೆ ಕನ್ನಡದಲ್ಲೇ ಚಾಟಿಸುವ ಅವಕಾಶ.
ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಿದಲ್ಲಿ ಉತ್ತಮ…
ಅಥವಾ ಅದರ ಬಗ್ಗೆಯೇ ಒಂದು ಬರಹವನ್ನು ನಮ್ಮ ತಾಣ http://www.prakashaka.com ಗೆ ಬರೆಯ ಬಹುದೆ?
ನಮ್ಮ ವಿಳಾಸ prakashaka@gmail.com ಗೆ ತಿಳಿಸಿದಲ್ಲಿ ಉತ್ತಮ
ಧನ್ಯವಾದಗಳೊಂದಿಗೆ
ನಿಮ್ಮ ಪ್ರಕಾಶಕ
ಪ್ರಕಾಶ್ ಶೆಟ್ಟಿ ಉಳೆಪಾಡಿ
ನಮಸ್ಕಾರ ಪ್ರಕಾಶ್ ಶೆಟ್ರಿಗೆ,
ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ತಾಣ ನೋಡಿ ಸಂತೋಷವಾಯಿತು. ಸದ್ಯಕ್ಕೆ ನಾನು ಕಾರ್ಯ ನಿಮಿತ್ತ ಬೇರೆ ಊರಿನಲ್ಲಿರುವುದರಿಂದಾಗಿ, ಮರಳಿದ ಬಳಿಕ ಈ ಬಗ್ಗೆ ಪ್ರಯತ್ನಿಸುತ್ತೇನೆ.
ಮತ್ತು ನಿಮ್ಮಲ್ಲಿ ಯುನಿಕೋಡ್‌ನಲ್ಲಿ ಟೈಪ್ ಮಾಡಿದರೆ ಅವಕಾಶವಿದೆಯೇ?
ಧನ್ಯವಾದಗಳು.
nimage aBinaMdanegaLu.
idannu yUnikOD nalli mAtra mADuvudara jotege sAmanya akSaragaLannu baLasi upayOgisuvante mADuvudu agatya.
paNDitArAdhya
ಪಂಡಿತಾರಾಧ್ಯ ಅವರಿಗೆ ಸ್ವಾಗತ.
ಯಾಹೂ ಪ್ಲಗ್-ಇನ್‌ನಲ್ಲಿ ಯುನಿಕೋಡ್ ವ್ಯವಸ್ಥೆ ಇರುವುದರಿಂದ ಹೊಸ ವಿಂಡೋಸ್ (ಎಕ್ಸ್‌ಪಿ ಮತ್ತು ನಂತರದ್ದು) ನಲ್ಲಿ ಬಳಸುವವರಿಗೆ ಸುಲಭವಾಗಲಿದೆ.
I see your site very good and abnormously fine.
ಶಿವರಾಜ್ ಅವರಿಗೆ ನಮಸ್ಕಾರ,
ನಿಮ್ಮ ಅಭಿಮಾನಕ್ಕೆ ಋಣಿ.
ನಮಸ್ಕಾರ
-ಅವಿನಾಶ್