ವಾಟ್ಸಾಪ್ ಬಳಸುತ್ತಿರುವವರಿಗೆ ಇತ್ತೀಚೆಗೆ ಅದು ಪರಿಚಯಿಸಿದ ‘ಡಿಲೀಟ್’ ಆಯ್ಕೆ ಬಗ್ಗೆ ಗೊತ್ತಿದೆ. ನಾವೇನಾದರೂ ತಪ್ಪು ಸಂದೇಶವನ್ನು ಕಳುಹಿಸಿದರೆ, ಅಥವಾ ತಪ್ಪಾದ ಗ್ರೂಪುಗಳಿಗೆ ಫಾರ್ವರ್ಡ್ ಮಾಡಲಾದ ಸಂದೇಶವನ್ನು ಏಳು ನಿಮಿಷಗಳೊಳಗೆ ಡಿಲೀಟ್ ಮಾಡುವ ಆಯ್ಕೆ ನೀಡಲಾಗಿತ್ತು. ಅದರ ಜನಪ್ರಿಯತೆಯನ್ನು ಮನಗಂಡ ವಾಟ್ಸಾಪ್, ಡಿಲೀಟ್ ಮಾಡಬಹುದಾದ ಅವಧಿಯನ್ನು ವಿಸ್ತರಿಸಿದೆ. ಅಂದರೆ, ಬೇರೆಯವರು ನೋಡುವ ಮುನ್ನ ಇದುವರೆಗೆ 420 ಸೆಕೆಂಡುಗಳೊಳಗೆ ನಾವು ಡಿಲೀಟ್ ಮಾಡಿದ್ದರೆ ಅದನ್ನು ಮುಂದೆ ಯಾರೂ ನೋಡುವುದು ಸಾಧ್ಯವಿರಲಿಲ್ಲ. ಈಗಿನ ಪ್ರಕಾರ, ಈ ಅವಧಿಯನ್ನು ವಾಟ್ಸಾಪ್ 4096 ಸೆಕೆಂಡಿಗೆ ವಿಸ್ತರಿಸಿದೆ. ಅಂದರೆ 68 ನಿಮಿಷ 16 ಸೆಕೆಂಡುಗಳವರೆಗೂ ನೀವು ‘ಡಿಲೀಟ್ ಫಾರ್ ಎವ್ರಿವನ್’ ಎಂಬ ಬಟನ್ ಕ್ಲಿಕ್ ಮಾಡಬಹುದು. ಆ ಬಳಿಕ ಡಿಲೀಟ್ ಮಾಡಲಾಗದು. ಅಷ್ಟರೊಳಗೆ ಯಾರಾದರೂ ಅದನ್ನು ಓದಿದ್ದರೆ ತಪ್ಪು ಬರೆದಿರುವುದಕ್ಕೆ/ಫಾರ್ವರ್ಡ್ ಮಾಡಿರುವುದಕ್ಕೆ ಕ್ಷಮೆ ಇಲ್ಲ!
ಇವನ್ನೂ ನೋಡಿ
ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ
ಕರಾಗ್ರೇ ವಸತೇ ಲಕ್ಷ್ಮೀ | ಕರಮಧ್ಯೇ ಸರಸ್ವತೀ
ಕರಮೂಲೇ ಸ್ಥಿತೇ ಗೌರಿ | ಪ್ರಭಾತೇ ಕರದರ್ಶನಂ ||
ಎಂಬ ಮಂತ್ರದೊಂದಿಗೆ ಹೆಚ್ಚಿನವರು ತಮ್ಮ ಕರಗಳೆರಡನ್ನೂ ಕಂಗಳಲ್ಲಿ ತುಂಬಿಕೊಂಡು ದಿನವನ್ನಾರಂಭಿಸುತ್ತಾರೆ. ಕರದ ಅಗ್ರ ಸ್ಥಾನದಲ್ಲಿರುವವಳಾದ್ದರಿಂದ ಪಡೆಯುವುದಕ್ಕಿಂತಲೂ ಕೊಡುವುದರಲ್ಲಿ...