ಯಾವುದೇ ಆಮಂತ್ರಣ ಪತ್ರಿಕೆ ಅಥವಾ ಲೇಖನಗಳ ಪುಟವಿನ್ಯಾಸ ಮಾಡಬೇಕಾದ ಸಂದರ್ಭದಲ್ಲಿ ಯೂನಿಕೋಡ್ ಶಿಷ್ಟತೆಯ ಕನ್ನಡ ಅಕ್ಷರಗಳಲ್ಲಿ ವೈವಿಧ್ಯ ಇಲ್ಲದಿರುವುದು ಒಂದು ಮಟ್ಟಿನ ತೊಡಕು. ಯಾಕೆಂದರೆ, ನುಡಿ, ಬರಹ ಅಥವಾ ಶ್ರೀಲಿಪಿಗಳಲ್ಲಿದ್ದಷ್ಟು ಅಕ್ಷರ ವಿನ್ಯಾಸದ ವೈವಿಧ್ಯಗಳು ಯೂನಿಕೋಡ್‌ನಲ್ಲಿ ರೂಪುಗೊಂಡಿಲ್ಲ. ಆದರೂ, ಸದ್ಯಕ್ಕೆ ತುಂಗಾ ಹಾಗೂ ಏರಿಯಲ್ ಯೂನಿಕೋಡ್ ಎಂಎಸ್ ಎಂಬ ಫಾಂಟ್‌ಗಳ ಜತೆಗೆ ಕೇದಗೆ, ಮಲ್ಲಿಗೆ, ಸಂಪಿಗೆ, ಅಕ್ಷರ, ಜನ ಕನ್ನಡ, ರಘು ಕನ್ನಡ, ಸರಸ್ವತಿ ಮುಂತಾದವು ಅಂತರಜಾಲದಲ್ಲಿ ಉಚಿತವಾಗಿ ಲಭ್ಯ ಇವೆ. ಇವುಗಳ ಅಕ್ಷರ ಶೈಲಿಗಳು ಒಂದಕ್ಕಿಂತ ಒಂದು ಭಿನ್ನ. ಇವುಗಳನ್ನು ಬಳಸಿ ನೋಡಬಹುದು. ಯೂನಿಕೋಡ್‌ನಲ್ಲಿ ಕೆಲವೊಂದು ಅಕ್ಷರಗಳ ಕೂಡಿಕೆಯ ಬಗ್ಗೆ ಗೊಂದಲಗಳಿವೆಯಾದರೂ, ಈ ಕುರಿತು ಸಂಶೋಧನೆ, ಅಭಿವೃದ್ಧಿ ಕೆಲಸ ಇನ್ನೂ ಮುಂದುವರಿಯುತ್ತಿದೆ.
ಇವನ್ನೂ ನೋಡಿ
ವಾರ್ಷಿಕ 500 ರೂ. ಆಸುಪಾಸಿನಲ್ಲಿ ಸ್ವಂತ ವೆಬ್ಸೈಟ್ ಹೊಂದುವುದು ಹೇಗೆ?
ಡೊಮೇನ್ ಹೆಸರು ರಿಜಿಸ್ಟ್ರೇಶನ್, ಹೋಸ್ಟಿಂಗ್ ಸೇವೆ ಮೂಲಕ ಸುಲಭವಾಗಿ ನಮ್ಮದೇ ಸ್ವಂತ ವೆಬ್ ತಾಣ ಹೊಂದುವುದು ಹೇಗೆ ಅಂತ ಕಳೆದ ವಾರದ ಅಂಕಣದಲ್ಲಿ ಹೇಳಿದ್ದೆ. ಈ ಬಗ್ಗೆ ಸಾಕಷ್ಟು ಕರೆಗಳು, ಇಮೇಲ್ಗಳು ಬಂದಿವೆ....
ಈ ’ಸರಸ್ವತಿ’ ಫಾಂಟು ಎಲ್ಲಿ ಡೌನ್ಲೋಡಿಗೆ ಸಿಗ್ತದೆ ಹೇಳ್ತಿರಾ ಪ್ಲೀಸ್.
http://www.wazu.jp/gallery/Fonts_Kannada.html ಈ ತಾಣದಲ್ಲಿ ಹಲವು ಲಿಂಕುಗಳಿವೆ. ಈಗ ಅದು ಕಾಣಿಸುತ್ತಿಲ್ಲ.