ಋಣಾತ್ಮಕವೇ ಧನಾತ್ಮಕ !!

8
307

ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು ಅನುಭವದಿಂದ.
ಆದ್ರೆ ತಪ್ಪು ನಿರ್ಧಾರದಿಂದಲೇ ಅಂತಹ ಅನುಭವ ದೊರೆಯತ್ತದೆ ಅನ್ನುವ ಮಾತು ಎಷ್ಟು ಸತ್ಯ…!

ಹೌದಲ್ವಾ….

ತಪ್ಪು ಮಾಡದಿದ್ದರೆ ಸರಿ ಮಾಡುವ ಬಗೆ ತಿಳಿಯುವುದೆಂತು? ಅಥವಾ ಈ ರೀತಿ ಮಾಡಿದರೆ ಮಾತ್ರ ಸರಿಯಾಗುತ್ತದೆ ಎಂದು ತಿಳಿಯುವುದೆಂತು?

ಕೊಚ್ಚೆ ಇದ್ದರೆ ತಾನೇ ಸ್ವಚ್ಛತೆಯ ಮೌಲ್ಯ ಗೊತ್ತಾಗುವುದು?

ಹಾಗಿದ್ದರೆ ಅದನ್ನು ಹೀಗೆ ತಿಳಿದುಕೊಳ್ಳಬಹುದು.

ತಪ್ಪು ದಾಟಿ ಹೋದರೆ ಸರಿ.

ಸೋಲನ್ನು ದಾಟಿದರೆ ಗೆಲುವು.

ಆದರೆ ಇದನ್ನು ದಾಟಲು ಗೊತ್ತಿರಬೇಕು. ಬೇರೆಯವರ ಅನುಭವದಿಂದ ಪಾಠ ಕಲಿಯಬೇಕು.

ಇದೇ ನಿರೀಕ್ಷೆಯೇ ಎಲ್ಲರಲ್ಲೂ ಆತ್ಮವಿಶ್ವಾಸ ವೃದ್ಧಿಸುತ್ತದೆ.

ಆದರೂ… ತಪ್ಪು…? ಅದು ಮಾಡಿದ್ರೆ ಮಾತ್ರ ಅನುಭವ ಅನ್ನೋದು….?

ಛೆ! ಇದು ಮಾತ್ರ ಮನಸ್ಸಿಂದ ದೂರವಾಗುವುದೇ ಇಲ್ಲವಲ್ಲಾ…?

8 COMMENTS

  1. ಅವೀ,

    ಯಾವ ತಪ್ಪು ಅನ್ನೋದರ ಮೇಲೆ ಅದು ನಿರ್ಧರಿತವಾಗುತ್ತದೆ.ಕೆಲವೊಂದು ತಪ್ಪುಗಳು ಮಾಡಿ ದಕ್ಕಿಸಿಕೊಳ್ಳಬಹುದು..ಆದರೆ ಇನ್ನ ಕೆಲವು ತಪ್ಪುಗಳು ಕಲಿಸುವ ಅನುಭವಗಳು ಜೀವನ ಪೂರ್ತಿ ಒಂದು ತರ ಬ್ಯಾಕ್ ಪ್ಯಾಕ್ ತರ…

  2. ಹೌದು ಶಿವ್,
    ಕೆಲವೊಮ್ಮೆ ನಾವು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟರೆ ಅಥವಾ ತಿದ್ದಿಕೊಂಡರೆ ಏನೂ ಪರಿಹಾರ ಕಾಣುವುದಿಲ್ಲ. ಅವುಗಳ ನೆನಪುಗಳಂತೂ ಶಾಶ್ವತವಾಗಿರುತ್ತವೆ. ಇನ್ನು ಕೆಲವು ತಪ್ಪುಗಳು ಹೊಸ ಶೋಧಕ್ಕೆ ವೇದಿಕೆಯಾಗುತ್ತವೆ. ಮತ್ತೂ ಕೆಲವು ತಪ್ಪುಗಳು ದಾರಿ ದೀಪಗಳಾಗುತ್ತವೆ.

  3. nodu guru,
    ee gurigala ottu motthave jeevana, namage kone usirina varegoo aahaara aaguvude “vismaya”.
    aa vismayakke kaayuvudu guri,

    naale enu? adoo vismayave,
    ninne yaake haage? idoo vismayave..

    ithi,
    janasaagaradalli ekangi

  4. ಅನಾಮಿಕ ಏಕಾಂಗಿಗಳೇ,
    ನನ್ನ ಬ್ಲಾಗಿಗೆ ಸ್ವಾಗತ
    ವಿಸ್ಮಯದ ಬಗ್ಗೆ ವಿಸ್ಮಯಕಾರಿಯಾದ ಸತ್ಯವನ್ನು ಹೇಳಿದ್ದೀರಿ… ಧನ್ಯವಾದ.

LEAVE A REPLY

Please enter your comment!
Please enter your name here