Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್ ಆ್ಯಪ್‌ಗಳು ಇವೆ.

How is Nokia C21 Plus: ನೋಕಿಯಾದ ಬಜೆಟ್ ಫೋನ್ ರಿವ್ಯೂ

Nokia C21 Plus Review: ಆಂಡ್ರಾಯ್ಡ್ ಗೋ ಕಾರ್ಯಾಚರಣೆ ವ್ಯವಸ್ಥೆಯಿರುವುದರಿಂದ, ಬ್ಲಾಟ್‌ವೇರ್‌ಗಳಿಲ್ಲದೆ, ಕ್ಲೀನ್ ಆಂಡ್ರಾಯ್ಡ್ ವ್ಯವಸ್ಥೆ. ಉತ್ತಮ ಬ್ಯಾಟರಿ.

Tecno Pova 3 Review: ಭರ್ಜರಿ ಬ್ಯಾಟರಿ ಸಹಿತ ಗೇಮಿಂಗ್ ಪ್ರಿಯರಿಗೆ ಇಷ್ಟವಾಗುವ ಫೋನ್

Tecno Pova 3 Review: ವಿಡಿಯೊದಿಂದ ಎಂಪಿ3ಗೆ ಪರಿವರ್ತಿಸುವ ವ್ಯವಸ್ಥೆ ಇದರಲ್ಲಿ ಅಡಕವಾಗಿರುವ ‘ವಿಷಾ’ ಹೆಸರಿನ ವಿಡಿಯೊ ಪ್ಲೇಯರ್‌ನಲ್ಲಿದೆ. ಜೊತೆಗೆ, ನಮ್ಮ ಚಿತ್ರದ ಮೂಲಕ ವೈವಿಧ್ಯಮಯ ಶಾರ್ಟ್ ವಿಡಿಯೊ ರಚಿಸುವ ಹಲವಾರು ಟೆಂಪ್ಲೇಟ್‌ಗಳು ಗಮನ ಸೆಳೆಯುತ್ತವೆ. ‘ವಿ-ಲೈಫ್’ ಆ್ಯಪ್ ಮೂಲಕ ಎಲ್ಲ ಸ್ಮಾರ್ಟ್ ಸಾಧನಗಳನ್ನು ಒಂದೇ ಕಡೆ ಸೇರಿಸಿಕೊಂಡು ನಿಯಂತ್ರಿಸಬಹುದು. ಗಮನ ಸೆಳೆದಿದ್ದೆಂದರೆ ಹಾಯ್ ಟ್ರಾನ್ಸ್‌ಲೇಟ್ ಎಂಬ ಭಾಷಾಂತರ ಆ್ಯಪ್. ಕನ್ನಡವೂ ಸೇರಿದಂತೆ ದೇಶದ ಮತ್ತು ವಿದೇಶದ ಹಲವಾರು ಭಾಷೆಗಳ ಮಧ್ಯೆ ಅನುವಾದವನ್ನು ಪಠ್ಯ, ಧ್ವನಿ ಮೂಲಕವಾಗಿ ಮಾಡಬಹುದು. ಒಂದೊಂದೇ ವಾಕ್ಯವನ್ನು ಅದು ಬಹುತೇಕ ನಿಖರವಾಗಿ ಅನುವಾದಿಸಿಕೊಡುತ್ತದೆ.

Samsung Galaxy A73 Review: ಅತ್ಯಾಧುನಿಕ ವೈಶಿಷ್ಟ್ಯಗಳ 108MP ಕ್ಯಾಮೆರಾ ಫೋನ್

Samsung Galaxy A73 Review in Kannada: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯಲ್ಲೇ ಅತ್ಯಾಧುನಿಕ ಮತ್ತು ಫ್ಲ್ಯಾಗ್‌ಶಿಪ್ ಮಾದರಿಯ ವೈಶಿಷ್ಟ್ಯಗಳುಳ್ಳ ಗ್ಯಾಲಕ್ಸಿ ಎ73 ಫೋನ್, ಏ.11ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ 8GB/256GB ಮಾದರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ73 ಫೋನ್ ಹೇಗಿದೆ? ಒಂದು ವಾರದ ಬಳಕೆಯಲ್ಲಿ ಕಂಡುಬಂದ ಅಂಶಗಳು ಇಲ್ಲಿವೆ.

Samsung Galaxy M33 5G Review: ಉತ್ತಮ ಕ್ಯಾಮೆರಾ, ಬ್ಯಾಟರಿಯ ಶಕ್ತಿಶಾಲಿ ಫೋನ್

Samsung Galaxy M33 5G. ಹಿಂದಿನ ಎಂ32ರ ಉತ್ತಮ ಅಪ್‌ಗ್ರೇಡ್ ಇದು. ವಿಶೇಷವಾಗಿ ಗ್ಯಾಲಕ್ಸಿ ಎ ಸರಣಿಯ ಅತ್ಯಾಧುನಿಕ ಫೋನ್‌ಗಳಾದ ಎ53 5ಜಿಯಲ್ಲಿ ಬಳಕೆಯಾಗಿರುವ ಹೊಸ ಎಕ್ಸಿನೋಸ್ ಚಿಪ್ ಇಲ್ಲೂ ಬಳಕೆಯಾಗಿದ್ದು, 120Hz ರಿಫ್ರೆಶ್ ರೇಟ್, 6000mAh ಬ್ಯಾಟರಿ ಇದರಲ್ಲಿಯೂ ಇದೆ.

How To: Google Lens ಬಳಸುವುದು ಹೇಗೆ?

Google Lens: ಸ್ಮಾರ್ಟ್‌ಫೋನ್ ಇದ್ದವರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಥವಾ ಆ್ಯಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಲಕ್ಷಾಂತರ ಆ್ಯಪ್‌ಗಳಲ್ಲಿ (ಅಪ್ಲಿಕೇಶನ್‌ಗಳು ಅಥವಾ ಕಿರು ತಂತ್ರಾಂಶಗಳು) ಯಾವುದನ್ನು ಬಳಸಬೇಕು, ಯಾವುದು ಬೇಕಾಗಿಲ್ಲ ಎಂಬುದೇ ಗೊಂದಲದ ವಿಷಯ. ಇದರ ಮಧ್ಯೆ, ಈ ತಂತ್ರಜ್ಞಾನ ಯುಗದಲ್ಲಿ ನಮಗೆ ಪ್ರತಿಕ್ಷಣವೂ ನೆರವಾಗಬಲ್ಲ ಆ್ಯಪ್‌ಗಳಲ್ಲಿ ಪ್ರಮುಖವಾದದ್ದು Google Lens. ಇದರ ಕೆಲಸವನ್ನು ಒಂದೇ ವಾಕ್ಯದಲ್ಲಿ ವಿವರಿಸಬಹುದಾದರೆ, ನಾವೇನು ನೋಡುತ್ತೇವೆಯೋ, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಮುಂದೆ ಧುತ್ತನೇ ಮುಂದಿಡಬಲ್ಲ ಆ್ಯಪ್ ಇದು.