ಆ್ಯಪಲ್ ಸಾಧನಗಳ ನಡುವೆ ವೈರ್ ಇಲ್ಲದೆಯೇ ಸುಲಭವಾಗಿ ಫೈಲ್‌ಗಳನ್ನು ವರ್ಗಾಯಿಸಲು ಅವುಗಳಲ್ಲಿರುವ ಏರ್‌ಡ್ರಾಪ್ ಎಂಬ ಆ್ಯಪ್ ನೆರವಾಗುತ್ತದೆ. ಇದು ಐಒಎಸ್ (ಆ್ಯಪಲ್‌ನ ಕಾರ್ಯಾಚರಣಾ ವ್ಯವಸ್ಥೆ) ಇರುವ ಸಾಧನಗಳಿಗಷ್ಟೇ ಲಭ್ಯ. ಇದು ಯಾವುದೇ ಪ್ರತ್ಯೇಕ ತಂತ್ರಾಂಶ ಅಳವಡಿಸದೆಯೇ, ಅತ್ಯಂತ ವೇಗವಾಗಿ ಫೈಲ್ ವರ್ಗಾಯಿಸಲು ಸಹಾಯ ಮಾಡುತ್ತದೆ.