Oxford ನಿಂದ faux-pas

4
821

ತಪ್ಪುಗಳು ಆಗುವುದು ಸಹಜ. ಆದರೆ ಒಂದು Well established ಮತ್ತು ವಿವರಗಳ ನಿಖರತೆಗಾಗಿ ಹೆಸರು ಮಾಡಿರುವ ಸಂಸ್ಥೆಯೊಂದು ಏಕಾಏಕಿಯಾಗಿ ಸತ್ಯಾಂಶ ಅರಿತುಕೊಳ್ಳದೆಯೇ ವಿಷಯ ಪ್ರಕಟಿಸಿದಾಗ ಅವುಗಳ ಬಗ್ಗೆ ಚರ್ಚೆಯಾಗಬೇಕಾಗುತ್ತದೆ.

ಈ ಕುರಿತ ವರದಿ ಇಲ್ಲಿ ನೋಡಿದಾಗ ಇದನ್ನು ಬರೆಯಬೇಕೆನಿಸಿತು.

ಆಕ್ಸ್‌ಫರ್ಡ್‌ ಡಿಕ್ಷನರಿಯಂತಹ ಒಂದು ವಿಶ್ವಾಸಾರ್ಹ ಪ್ರಕಾಶನವು ಬೆಂಗಳೂರಿಗೂ ಬೆಂಗಾಳಿ ಭಾಷೆಗೂ ಸಂಬಂಧ ಕಲ್ಪಿಸಿದ್ದು ಹೇಗೆ? ಬಂಗ ಎಂಬ ಅರಸರಿಂದಾಗಿ ಬೆಂಗಳೂರು ಹೆಸರು ಬಂದಿದೆ, ಬೆಂಗಳೂರಿಗರ ಭಾಷೆ ಬೆಂಗಾಳಿ ಎಂಬಿತ್ಯಾದಿ ವಿವರಗಳನ್ನು ಕೇವಲ ಊಹೆಯಿಂದಲೇ ಬರೆಯಲಾಗಿದೆ ಎಂದು ನಾವು ಅರ್ಥೈಸಿಕೊಳ್ಳಬಹುದು.

ವಿಶ್ವಾದ್ಯಂತ ಪ್ರಸಾರವಾಗುವ ಈ ಪದಕೋಶವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಸಮಗ್ರ ಪರಿಶೀಲನೆಗೊಳಪಡಿಸುವ ವಿವೇಚನೆ ಯಾಕೆ ಪ್ರಕಾಶನದ ಸಂಪಾದಕರಿಗೆ ಹೊಳೆಯಲಿಲ್ಲ ಎಂಬುದು ಚರ್ಚಿಸಬೇಕಾದ ಪ್ರಶ್ನೆ. ಈಗಾಗಲೇ ಈ ವಿವರವುಳ್ಳ ಪದಕೋಶವು ಮಾರುಕಟ್ಟೆಯಲ್ಲಿದೆ. ಕನಿಷ್ಠಪಕ್ಷ ಇದನ್ನು ಓದಿದವರಾದರೂ ಬೆಂಗಳೂರು ಬಗ್ಗೆ, ಕನ್ನಡದ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸಿಕೊಂಡಿರುತ್ತಾರೆ ಎಂಬುದು ಖೇದಕರ ವಿಷಯ.

ಪತ್ರಿಕೆಗಳು ಅಥವಾ ಇತರ ಮಾಧ್ಯಮಗಳಲ್ಲಿಯೂ ಇಂಥ ವಿಷಯಗಳನ್ನು ಪ್ರಕಟಿಸುವಾಗ Cross-Checking ಮಾಡಲಾಗುತ್ತೆ/ಮಾಡಬೇಕಾಗುತ್ತದೆ. ಎಲ್ಲಾದರೂ ಅಪ್ಪಿ ತಪ್ಪಿ ದೋಷಯುಕ್ತ ವರದಿ ಪ್ರಕಟವಾದರೆ ತಿದ್ದುಪಡಿ ಪ್ರಕಟಿಸಬಹುದು. ಆದರೆ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಪದಕೋಶದ ವಿಷಯದಲ್ಲಿ ಹೀಗೆ ಮಾಡಲಾಗುತ್ತದೆಯೇ?

ಇದು ಗಮನಕ್ಕೆ ಬಂದ ಕೂಡಲೇ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ಈ ಡಿಕ್ಷನರಿಯ ಮಾರಾಟವನ್ನು ತಡೆಹಿಡಿದು ಒಳ್ಳೆ ಕೆಲಸ ಮಾಡಿದೆ ಮತ್ತು ಕ್ಷಮೆಯನ್ನೂ ಯಾಚಿಸಿದೆ. ಆದರೆ ಎಲ್ಲರೂ ನಂಬಬಹುದಾದ ಪ್ರಬಲ ಮಾಧ್ಯಮದಲ್ಲಿ “ಕೌಡ” ಎಂಬವರು ಹೊಯ್ಸಳರ ಜತೆಗೆ ಸೇರಿಕೊಂಡು ಬೆಂಗಳೂರು ನಿರ್ಮಿಸಿದರು ಎಂಬಂಥಹ ಪ್ರಮಾದಭರಿತ ವಿವರಗಳನ್ನು ಪ್ರಕಟಿಸುವಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ಪ್ರಕಾಶನದ ಸಂಪಾದಕರು ಹಿಂದೆಮುಂದೆ ನೋಡಿಲ್ಲವೇಕೆ? ತಿಳಿಯದಿದ್ದರೆ ತಿಳಿದವರಲ್ಲಿ ಕೇಳಿ ಪ್ರಕಟಿಸಬಹುದಿತ್ತು. ಇದು ಪತ್ರಿಕಾಲಯಗಳಲ್ಲಿ ಸಾಮಾನ್ಯವಾಗಿ ಸಂಭವಿಸುವಂತೆ ಅವಸರದಿಂದಾಗಿ ನಡೆದ ಪ್ರಮಾದವೇ?

4 COMMENTS

  1. ಅಬ್ಬಾ……ಎಷ್ಟು ಚೆನ್ನಾಗಿ ಬಿಂಬಿಸಿದ್ದಿರಾ ಆ ನಿಮ್ಮ ಸುಂದರವಾದ ದಿನಗಳು ಮತ್ತು ಕ್ಷಣಗಳನ್ನು ಅಬ್ಬಬ್ಬಾ. ಕಾಲೇಜು ದಿನಗಳು ನಿಜವಾಗಿಯು ರೋಮಾಂಚನ,ನೋವು-ನಲಿವು,ಸಂತೋಷದಿಂದ ಕೂಡಿರುವ ದಿನಗಳು..

    ತುಂಬಾ ಚೆನ್ನಾಗಿ ಬರೆದಿದ್ದಿರಾ… ಮುಖ್ಯವಾಗಿ ಅವಿ-ಮಲ್ಲು ಪಾತ್ರಗಳು ರೋಮಾಂಚನ ಉಂಟುಮಾಡುತ್ತದೆ ಪ್ರತಿ ಸಾಲಿನಲ್ಲೂ ಕೂತೂಹಲ ಎದ್ದುಕಾಣುತ್ತದೆ..

  2. ಲಕ್ಷ್ಮಿ ವೆಂಕಟೇಶ್ ಅವರೆ,
    ನಿಮ್ಮ ಮೆಚ್ಚುಗೆ ನುಡಿಗೆ ಧನ್ಯವಾದ. ನೀವು ಎಲ್ಲಿ ಬರೆಯುತ್ತಿದ್ದೀರಿ? ಅದರ ಲಿಂಕ್ ಕೊಡಬಹುದೇ?

  3. ಪುಷ್ಪಾ, ಸ್ವಾಗತ ಈ ಬ್ಲಾಗಿಗೆ.

    ನಿಮ್ಮ ಕಾಲೇಜು ಜೀವನವೂ ಇದೇ ರೀತಿ ಸಿಹಿ ಭರಿತವಾಗಿರಲಿ. ಅದು ನಿಮ್ಮ ಬ್ಲಾಗಿನಲ್ಲಿ ಕವನರೂಪದಲ್ಲಿ ಮೂಡಿಬರಲಿ.

LEAVE A REPLY

Please enter your comment!
Please enter your name here