ಒನ್‌ಪ್ಲಸ್ 8, ಒನ್‌ಪ್ಲಸ್ 8 ಪ್ರೊ: ಲಭ್ಯತೆ, ಆರಂಭಿಕ ಬೆಲೆ, ಸ್ಪೆಸಿಫಿಕೇಶನ್ಸ್

0
365

ಅತ್ಯಾಧುನಿಕವಾದ ಪ್ರೀಮಿಯಂ ಒನ್ ಪ್ಲಸ್ 8 ಪ್ರೋ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಅತಿ ವೇಗ, ಮೃದುವಾದ ಅನುಭವವನ್ನು ಗ್ರಾಹಕರಿಗೆ ನೀಡಲಿದೆ. ಈ ಒನ್ ಪ್ಲಸ್ 8 ಪ್ರೋ ಸ್ಮಾರ್ಟ್ ಫೋನ್ ಗ್ರಾಹಕರಿಗೆ ಹಿಂದೆಂದೂ ನೀಡದಂತಹ ಬಳಕೆಯ ಅನುಭವವನ್ನು ನೀಡಲಿದೆ’ ಎಂದು ಒನ್‌ಪ್ಲಸ್ ಸಂಸ್ಥಾಪಕ ಮತ್ತು ಸಿಇಒ ಪೀಟ್ ಲಾವು ಅವರು ಹೇಳಿದ್ದಾರೆ.

5ಜಿ ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವ ಸಾಧನಗಳಲ್ಲಿ ಮೊದಲನೆಯದು ಒನ್‌ಪ್ಲಸ್ 8 ಸರಣಿಯ ಸ್ಮಾರ್ಟ್‌ಫೋನ್‌ಗಳು.

ಒನ್‌ಪ್ಲಸ್ 8 ಪ್ರೊ
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್ ಇರುವ ಈ ಫೋನ್ ಅತ್ಯುತ್ತಮ ಫ್ಲ್ಯಾಗ್‌ಶಿಪ್ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

6.78 ಇಂಚು QHD+ ಫ್ಲೂಯಿಡ್ AMOLED ಡಿಸ್‌ಪ್ಲೇ, 120 Hz ರೀಫ್ರೆಶ್ ರೇಟ್ ಇರುವುದರಿಂದ ಅನಿಮೇಷನ್‌ಗಳು ಮತ್ತು ವಿಡಿಯೋ ಪ್ಲೇಬ್ಯಾಕ್ ಅತ್ಯುತ್ಕೃಷ್ಠ ದರ್ಜೆಯಲ್ಲಿರುತ್ತದೆ.

ಸುಧಾರಿತ ವೈ-ಫೈ 6, ಡಾಲ್ಬಿ ಅಟ್ಮೋಸ್ ಡ್ಯುಯೆಲ್ ಸ್ಟೀರಿಯೋ ಸ್ಪೀಕರ್ ಜೊತೆಗೆ 12 ಜಿಬಿವರೆಗೆ LPDDR5 RAM ಇದೆ.ಕಟ್ಟಿಂಗ್ ಎಡ್ಜ್ ಅನ್ನು ಒಳಗೊಂಡಿದೆ. 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಪ್ರಧಾನ ಕ್ಯಾಮೆರಾವು ಸೋನಿ ಐಎಂಎಕ್ಸ್ 689 ಸೆನ್ಸರ್ ಹೊಂದಿದೆ. 3x ಹೈಬ್ರಿಡ್ ಮತ್ತು 30x ಡಿಜಿಟಲ್ ಝೂಂನೊಂದಿಗೆ ಟೆಲಿಫೋಟೋ ಲೆನ್ಸ್ ಇದೆ. ಶಕ್ತಿಶಾಲಿಯಾದ ವಾರ್ಪ್ ಚಾರ್ಜ್ 30 ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ 4510 mAh ಬ್ಯಾಟರಿ ಇದ್ದು, ಕೇವಲ 23 ನಿಮಿಷಗಳಲ್ಲಿ ಶೇ.50ರಷ್ಟು ಚಾರ್ಜ್ ಆಗುತ್ತದೆ.

ಒನ್ ಪ್ಲಸ್ 8 ಪ್ರೊ ಒನಿಕ್ಸ್ ಬ್ಲ್ಯಾಕ್, ಅಲ್ಟ್ರಾಮರೈನ್ ಬ್ಲ್ಯೂ ಮತ್ತು ಗ್ಲಾಸಿಕಲ್ ಗ್ರೀನ್ ಬಣ್ಣಗಳಲ್ಲಿರುತ್ತವೆ.

ಒನ್ ಪ್ಲಸ್ 8
ಪ್ರೊ ಜೊತೆಗೆ ಒನ್‌ಪ್ಲಸ್ 8 ಆವೃತ್ತಿಯೂ ಬಿಡುಗಡೆಯಾಗಿದ್ದು, 5ಜಿ ಬೆಂಬಲಿಸುತ್ತದೆ. 90 Hz ಫ್ಲೂಯಿಡ್ ಡಿಸ್‌ಪ್ಲೇ ಇದ್ದು, 6.55 ಇಂಚು ವಿಸ್ತಾರವಾಗಿದೆ. HDR 10 ಮತ್ತು 10+ ಬೆಂಬಲಿಸುತ್ತಿದ್ದು, ಫೋಟೋ ಮತ್ತು ವಿಡಿಯೋಗಳು ಹೆಚ್ಚು ನಿಖರವಾಗಿ ಗೋಚರಿಸುತ್ತವೆ. ಕ್ಯಾಮೆರಾ ಸಿಸ್ಟಂ ಮೂರು ಶಕ್ತಿಶಾಲಿ ಕ್ಯಾಮೆರಾಗಳನ್ನು ಹೊಂದಿದ್ದು, ಸೋನಿಯ 48 MP ಐಎಂಎಕ್ಸ್ 586 ಸೆನ್ಸಾರ್ ಇದೆ. 16 MP ಅಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಕ್ಯಾಮೆರಾವು 116-ಡಿಗ್ರಿಯ ವೀಕ್ಷಣೆಗೆ ಸಹಕಾರಿಯಾಗಲಿದೆ. ಸ್ನ್ಯಾಪ್ ಡ್ರಾಗನ್ 865 ಪ್ರೊಸೆಸರ್ ಇದ್ದು, 12 ಜಿಬಿವರೆಗೆ RAM ಇದೆ. 4300 mAh ಸಾಮರ್ಥ್ಯದ ವಾರ್ಪ್ ಚಾರ್ಜಿಂಗ್ ಬ್ಯಾಟರಿ ಇದ್ದು, ಕೇವಲ 180 ಗ್ರಾಂ ತೂಕವಿದೆ.

ಆಕ್ಸಿಜನ್ ಒಎಸ್
ಒನ್‌ಪ್ಲಸ್ 8 ಸರಣಿಯಲ್ಲಿ ಆಕ್ಸಿಜನ್ ಒಎಸ್ ಆ್ಯಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯು ಆ್ಯಂಡ್ರಾಯ್ಡ್ 10 ಆಧಾರಿತವಾಗಿದೆ.

ಗೂಗಲ್ ನೆರವು: ಗೂಗಲ್ ಒನ್, ಗೂಗಲ್ ಡ್ರೈವ್, ಜಿಮೇಲ್ ಮತ್ತು ಗೂಗಲ್ ಫೋಟೋಸ್ ಹಾಗೂ ಆಟೋಮ್ಯಾಟಿಕ್ ಫೋನ್ ಬ್ಯಾಕಪ್‌ಗೆ ನೆರವಾಗಲು ಗೂಗಲ್‌ನ ಸಿಗ್ನೇಚರ್ ಮೆಂಬರ್‌ಶಿಪ್ ಪ್ರೋಗ್ರಾಂ ಅನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಗೂಗಲ್‌ನೊಂದಿಗೆ ಒನ್‌ಪ್ಲಸ್ ಒಪ್ಪಂದ ಮಾಡಿಕೊಂಡಿದೆ. ಗೂಗಲ್ ಒನ್ ನೊಂದಿಗೆ ಬಳಕೆದಾರರು ತಮ್ಮ ಫೋಟೋಗಳು, ಕಾಂಟ್ಯಾಕ್ಟ್‌ಗಳನ್ನು ಮತ್ತು ಕ್ಲೌಡ್‌ನಲ್ಲಿ ಸುರಕ್ಷಿತವಾಗಿ ಸೇವ್ ಮಾಡಿಕೊಳ್ಳಬಹುದಾಗಿದೆ. ಈ ಒನ್ ಪ್ಲಸ್ 8 ಸರಣಿಯ ಬಳಕೆದಾರರು 100 ಜಿಬಿವರೆಗೆ ಕ್ಲೌಡ್ ಸ್ಟೋರೇಜ್ ಅನ್ನು 3 ತಿಂಗಳವರೆಗೆ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಬುಲೆಟ್ ವೈರ್‌ಲೆಸ್ ಝಡ್ ಇಯರ್ ಫೋನ್

ಬುಲೆಟ್ ವೈರ್‌ಲೆಸ್ ಝಡ್ ಎಂಬ ಇಯರ್ ಫೋನ್ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಿದೆ. 10 ನಿಮಿಷಗಳ ತ್ವರಿತ ಚಾರ್ಜ್, ಅತ್ಯಂತ ಹಗುರವಾಗಿರುವ ಮತ್ತು ಕಾಂಪ್ಯಾಕ್ಟ್ ಇಯರ್ ಬಡ್‌ಗಳು 10 ಗಂಟೆಗಳವರೆಗೆ ಮ್ಯೂಸಿಕ್ ಕೇಳಿಸಿಕೊಳ್ಳಲು ನೆರವಾಗುತ್ತವೆ.

ಬೆಲೆ ಮತ್ತು ಲಭ್ಯತೆ
ಒನ್‌ಪ್ಲಸ್ 8 ಫ್ಲ್ಯಾಗ್‌ಶಿಪ್ ಸೀರೀಸ್ ಮತ್ತು ಒನ್‌ಪ್ಲಸ್ ಬುಲೆಟ್ ವೈರ್‌ಲೆಸ್ ಝಡ್ ದೇಶಾದ್ಯಂತ ಶೀಘ್ರವೇ ಲಭ್ಯ ಆಗಲಿವೆ.

LEAVE A REPLY

Please enter your comment!
Please enter your name here