Android 10 ಇರುವ OnePlus 7T ಭಾರತದಲ್ಲಿ ಲಭ್ಯ, OnePlus TV ಬಿಡುಗಡೆ

0
434

90 Hz ಡಿಸ್‍ಪ್ಲೇಯೊಂದಿಗೆ ಒನ್‍ಪ್ಲಸ್ ಟಿ7 ಮತ್ತು ಇಂಟರ್ ಕನೆಕ್ಟಿವಿಟಿ ಸಾಮರ್ಥ್ಯದ OnePlus TV ಬಿಡುಗಡೆಯೊಂದಿಗೆ ಹೊಸ ಮೈಲಿಗಲ್ಲು

ಹೊಸದಿಲ್ಲಿ (27 ಸೆಪ್ಟೆಂಬರ್ 2019): ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಆಗಿರುವ ಒನ್‍ಪ್ಲಸ್ ಹೊಸದಾದ ಮತ್ತು ಬಹುನಿರೀಕ್ಷಿತ ಒನ್‍ಪ್ಲಸ್ 7ಟಿ ಸ್ಮಾರ್ಟ್ ಫೋನನ್ನು ಗುರುವಾರ ಇಲ್ಲಿನ ಇಂದಿರಾಗಾಂಧಿ ಅರೆನಾದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ವರ್ಷದ ಆರಂಭದಲ್ಲಿ ಒನ್‍ಪ್ಲಸ್ 7 ಸರಣಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬಹುನಿರೀಕ್ಷಿತ ಒನ್‍ಪ್ಲಸ್ 7ಟಿ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬಿರುಗಾಳಿ ಬೀಸುವಂತೆ ಮಾಡಿದೆ. 90 HZ ಫ್ಲ್ಯುಯಿಡ್ ಅಮೋಲೆಡ್ ಡಿಸ್‍ಪ್ಲೇಯನ್ನು ಹೊಂದಿರುವ ಈ ಒನ್‍ಪ್ಲಸ್ 7ಟಿ ಮೊಬೈಲ್ ಅತ್ಯಂತ ಹೆಚ್ಚು ಆಕರ್ಷಣೀಯವಾಗಿದೆ.

ಜತೆಗೆ ಒನ್‍ಪ್ಲಸ್ ಕಂಪನಿ ತನ್ನ ಮೊತ್ತಮೊದಲ ಒನ್‍ಪ್ಲಸ್ ಟಿವಿಯನ್ನೂ ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಟಿವಿಯು ಪರಿಕಲ್ಪನೆ ಮತ್ತು ಜಾಣ್ಮೆ – ಇವೆರಡರ ಮಿಶ್ರಣವಾಗಿದ್ದು, ಮೊಬೈಲ್ ಮತ್ತು ಹೋಂ ನೆಟ್‍ವರ್ಕ್‍ಗಳಿಗೆ ಸಂಪರ್ಕಿಸಬಹುದಾದ ವೈಶಿಷ್ಟ್ಯತೆ ಹೊಂದಿದೆ.

ಒನ್‍ಪ್ಲಸ್ ಪಾಲಿಗೆ ಇಂದಿನ ಹೊಸ ಉತ್ಪನ್ನಗಳ ಬಿಡುಗಡೆ ಈ ವರ್ಷದ ಬಹುದೊಡ್ಡ ಮೈಲಿಗಲ್ಲಾಗಿದೆ. ಭಾರತೀಯ ಪ್ರೀಮಿಯಂ ಸ್ಮಾರ್ಟ್‍ಫೋನ್ ವಿಭಾಗದಲ್ಲಿ ಟಾಪ್ ಬ್ರ್ಯಾಂಡ್ ಸ್ಥಾನವನ್ನು ಗಟ್ಟಿಗೊಳಿಸಿಕೊಂಡ ನಂತರ ಒನ್‍ಪ್ಲಸ್ ಕಂಪನಿಯು ಅಮೆರಿಕದ ಪ್ರೀಮಿಯಂ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಟಾಪ್ ನಾಲ್ಕು ಒಇಎಂಗಳ ಸಾಲಿಗೆ ಸೇರ್ಪಡೆಗೊಂಡಿದೆ. ಯುಕೆಯಲ್ಲಿ ಒನ್‍ಪ್ಲಸ್7 ಪ್ರೊ 5ಜಿ, ಒನ್‍ಪ್ಲಸ್ ಫಸ್ಟ್ ನೆಕ್ಸ್ಟ್ ಜನರೇಶನ್ ಫೋನ್‍ಗಳನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಿದ ದಿನದಿಂದ ಈ ಹಿರಿಮೆಯನ್ನು ಮುಂದುವರಿಸಿಕೊಂಡು ಬಂದಿದೆ.

ಒನ್‍ಪ್ಲಸ್ 7ಟಿ ಮತ್ತು ಒನ್‍ಪ್ಲಸ್ ಟಿವಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಒನ್‍ಪ್ಲಸ್‍ನ ಸಂಸ್ಥಾಪಕ ಮತ್ತು ಸಿಇಒ ಪೀಟ್ ಲಾವ್ ಅವರು, “ಒನ್‍ಪ್ಲಸ್ ಬಳಕೆದಾರರಿಗೆ ವೇಗದ ಮತ್ತು ಮೃದುವಾದ ಅನುಭವವನ್ನು ನೀಡುವಂತಹ ಅತ್ಯುತ್ತಮ ತಂತ್ರಜ್ಞಾನವನ್ನು ನೀಡಲು ಬಯಸುತ್ತದೆ. ಈ ಒನ್‍ಪ್ಲಸ್ 7ಟಿ ಸೂಪರ್ ಸ್ಮೂತ್ 90 Hz ಡಿಸ್‍ಪ್ಲೇಯೊಂದಿಗೆ ಸ್ಟೈಲ್ ಮತ್ತು ಗುಣಮಟ್ಟದ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಮೂರು ಕ್ಯಾಮೆರಾಗಳನ್ನು ಒಳಗೊಂಡಿರುವ ಈ ಪ್ರೀಮಿಯರ್ ಸ್ಮಾರ್ಟ್‍ಫೋನ್ ಗ್ರಾಹಕರಿಗೆ ಸರಿಸಾಟಿಯಿಲ್ಲದ ಅನುಭವವನ್ನು ನೀಡಲಿದೆ” ಎಂದರು.

Price:
OnePlus 7T Glacier Blue/Frosted Silver ಬೆಲೆ: 8GB 128GB ಆವೃತ್ತಿಗೆ ರೂ.37,999
OnePlus 7T Glacier Blue 8GB 256GB ಆವೃತ್ತಿಗೆ ರೂ. 39,999

ಒನ್‍ಪ್ಲಸ್ 7ಟಿ ವೈಶಿಷ್ಟ್ಯತೆಗಳು:
ಒನ್‍ಪ್ಲಸ್ 7ಟಿ ಆಕರ್ಷಕವಾದ ವಿನ್ಯಾಸ, 90Hz ನಂತಹ ಡಿಸ್‍ಪ್ಲೇ ಹೊಂದಿರುವ ಈ ಫೋನ್ ವೇಗ ಮತ್ತು ಮೃದುವಾದ ಅನುಭವವನ್ನು ಬಳಕೆದಾರರಿಗೆ ನೀಡಲಿದೆ.

ಬಳಕೆದಾರರ ಪ್ರತಿಕ್ರಿಯೆ ಮತ್ತು ಸಲಹೆಗಳ ಆಧಾರದ ಮೇಲೆ ಈ ಒನ್‍ಪ್ಲಸ್ 7ಟಿಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಪ್ರೀಮಿಯಂ ಸ್ಮಾರ್ಟ್‍ಫೋನ್ ಉದ್ಯಮದಲ್ಲಿ ಮೊದಲ ಬಾರಿಗೆ ಒನ್‍ಪ್ಲಸ್ 7 ಪ್ರೋ ನಲ್ಲಿ ಪರಿಚಯಿಸಲಾಗಿದ್ದ 90ಎಚ್‍ಝಡ್ ಕ್ಯೂಎಚ್‍ಡಿ AMOLED ಸ್ಕ್ರೀನ್‍ಗೆ ಬಳಕೆದಾರರು ಫಿದಾ ಆಗಿದ್ದರು. ಇದೀಗ ಇದೇ ವೈಶಿಷ್ಟ್ಯಗಳನ್ನು ಒನ್‍ಪ್ಲಸ್ 7ಟಿನಲ್ಲಿಯೂ ಮುಂದುವರಿಸಲಾಗಿದೆ.

2017 ರಿಂದ ಈ 90ಎಚ್‍ಝಡ್ ಫ್ಲ್ಯುಯಿಡ್ ಡಿಸ್‍ಪ್ಲೇಯನ್ನು ಬಳಸಲಾಗುತ್ತಿದೆ. ಇದು ಯಾವುದೇ ಫೋನ್‍ಗೆ ಹೆಚ್ಚಾಗಿ ಬಳಸಬಹುದಾದ ಭಾಗವಾಗಿದೆ. ಹೊಸ ಮೃದು ಸೂತ್ರದೊಂದಿಗೆ ಈ 90ಎಚ್‍ಝಡ್ ಫ್ಲ್ಯುಯಿಡ್ ಡಿಸ್‍ಪ್ಲೇಯನ್ನು ಬಳಸಿದ್ದು, ಇದರ ವಿಶೇಷವೆಂದರೆ ಕೇವಲ 40 ಮಿಲಿಸೆಕೆಂಡ್‍ಗಳಲ್ಲಿ ಪ್ರತಿಕ್ರಿಯೆ ನೀಡುತ್ತದೆ. ಅಂದರೆ, ಯಾವುದೇ ಸ್ಮಾರ್ಟ್‍ಫೋನ್‍ಗಿಂತ ಶೇ.38 ರಷ್ಟು ವೇಗದಲ್ಲಿ ಇದು ಪ್ರತಿಕ್ರಿಯಿಸುತ್ತದೆ. ಈ ಒನ್‍ಪ್ಲಸ್‍ನ 90ಎಚ್‍ಝಡ್ ಫ್ಲ್ಯುಯಿಡ್ ಡಿಸ್‍ಪ್ಲೇಯು ಭವಿಷ್ಯದ ಡಿಸ್‍ಪ್ಲೇ ಆಗಲಿದೆ.

ಇದಲ್ಲದೇ, ಒನ್‍ಪ್ಲಸ್ 7ಟಿಯ ಇತರೆ ವಿಶೇಷಗಳೆಂದರೆ, ಅತ್ಯದ್ಭುತವಾದ ಫೋಟೋಗಳನ್ನು ಕ್ಲಿಕ್ಕಿಸಲು ಸಮರ್ಥವಾಗಿರುವ ಮೂರು ಕ್ಯಾಮೆರಾಗಳು, ಆ್ಯಂಡ್ರಾಯ್ಡ್ 10 ಪ್ರೀಲೋಡ್ ಆಗಿರುವ ಮೊದಲ ಸ್ಮಾರ್ಟ್‍ಫೋನ್ ಆಗಿದ್ದು, ಇದರಲ್ಲಿನ ಕ್ಯಾಮೆರಾಗಳ ವೈಶಿಷ್ಟ್ಯತೆಗಳೆಂದರೆ, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್586, ಅರ್ಧ ಇಂಚಿನ ದೊಡ್ಡ ಇಮೇಜಿನ ಸೆನ್ಸಾರ್, 7ಪಿ ಲೆನ್ಸ್, ಒಇಎಸ್ ಸೇರಿದಂತೆ ಹಲವಾರು ಅಂಶಗಳಿವೆ.

ಒನ್‍ಪ್ಲಸ್ ಟಿವಿ
ಒನ್‍ಪ್ಲಸ್ ಟಿವಿಯನ್ನು ಅತ್ಯಂತ ಚತುರತೆಯಿಂದ ತಯಾರಿಸಲಾಗಿದ್ದು, ಸುಧಾರಿತ ಸಾಫ್ಟ್‌ವೇರ್ ಮತ್ತು ಹಾರ್ಡ್‍ವೇರ್ ಬಳಸಿ ಅಭಿವೃದ್ಧಿಪಡಿಸಲಾಗಿದೆ. ಈ ಟಿವಿಯ ವಿಶೇಷತೆಯೆಂದರೆ ಬಳಕೆದಾರರಿಗೆ ಒಳಾಂಗಣ ಮತ್ತು ಹೊರಾಂಗಣದ ಅನುಭವವನ್ನು ನೀಡುತ್ತದೆ. ಇದರಲ್ಲಿ ಮೂಡಿಬರಲಿರುವ ಚಿತ್ರಗಳು ಮತ್ತು ಸೌಂಡ್ ಗುಣಮಟ್ಟ ಅತ್ಯದ್ಭುತವಾಗಿದೆ. ಆಕರ್ಷಕವಾದ ಹೊರಾಂಗಣ ವಿನ್ಯಾಸ ಮತ್ತು ಅತ್ಯದ್ಭುತವಾದ ಅನುಭವಕ್ಕೆ ಗ್ರಾಹಕರು ಮಾರುಹೋಗದೇ ಇರಲಾರರು. ಸ್ಮಾರ್ಟ್‍ಫೋನ್ ಮತ್ತು ಟಿವಿ ಸಂಪರ್ಕದ ನಡುವೆ ತಡೆರಹಿತವಾಗಿ ಚಾಲನೆಯಲ್ಲಿರುವ ಪಾತ್ರವನ್ನು ಈ ಒನ್‍ಪ್ಲಸ್ ಟಿವಿ ನಿರ್ವಹಿಸಲಿದೆ.

ದೈನಂದಿನ ಬಳಕೆಯಲ್ಲಿರುವ ಎಲ್ಲಾ ವಿವಿಧ ತಂತ್ರಜ್ಞಾನಗಳ ಅಂಶಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಹಂಗಾಮ, ಎರೋಸ್ ಮತ್ತು ಝೀ5 ಮುಂತಾದವು ಒನ್‍ಪ್ಲಸ್ ಪ್ಲೇ ಡ್ಯಾಶ್‍ಬೋರ್ಡ್‍ನಲ್ಲಿವೆ. ಅಮೆಜಾನ್ ಪ್ರೈಂ ವಿಡೀಯೋ, ಹಾಟ್‍ಸ್ಟಾರ್, ಸೋನಿಲೈವ್ ಮತ್ತು ಯೂಟ್ಯೂಬ್ ಸೌಲಭ್ಯಗಳೂ ಇವೆ.

ಈ ಟಿವಿ ಭಾರತದ ಬಳಕೆದಾರರಿಗೆ ಸೂಕ್ತವಾದ ಮತ್ತು ಹೇಳಿ ಮಾಡಿಸಿದ ಟಿವಿಯಾಗಿದೆ. ಇದೇ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ಒನ್‍ಪ್ಲಸ್ ಟಿವಿ 55 ಕ್ಯೂ1 ಮತ್ತು ಒನ್‍ಪ್ಲಸ್ ಟಿವಿ 55 ಕ್ಯೂ1 ಪ್ರೋ ಟಿವಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅನುಕ್ರಮವಾಗಿ ಅದರ ಬೆಲೆ 69,900 ರೂ. ಹಾಗೂ 99,9000 ರೂ. ಆಗಿದೆಯ. ಇದು 55 ಇಂಚಿನ ಪ್ರೀಮಿಯಂ ಟಿವಿ.

“ನಾವು ಸಾಮಾನ್ಯ ಸ್ಮಾರ್ಟ್ ಟಿವಿಯನ್ನು ತಯಾರಿಸಲು ಇಷ್ಟಪಡುವುದಿಲ್ಲ. ಇಡೀ ಟಿವಿ ಉದ್ಯಮದಲ್ಲಿ ಅತ್ಯುನ್ನತವಾದ ಗುಣಮಟ್ಟವನ್ನು ಹೊಂದಿರುವ ಟಿವಿಯನ್ನು ತಯಾರಿಸಬೇಕೆಂಬುದು ನಮ್ಮ ಆಶಯವಾಗಿದೆ. ಇದಕ್ಕೆ ತಕ್ಕಂತೆ ನಾವು ಒನ್‍ಪ್ಲಸ್ ಟಿವಿಯನ್ನು ಅಭಿವೃದ್ಧಿಪಡಿಸಿ ಭಾರತೀಯ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ” ಎಂದು ಲಾವ್ ತಿಳಿಸಿದರು.

ಸ್ಲೀಕ್ ವಿನ್ಯಾಸ, 55 ಇಂಚುಗಳ 4ಕೆ QLED ಡಿಸ್‍ಪ್ಲೇ, ಡಾಲ್ಬಿ ವಿಶನ್ ಮತ್ತು ಎಚ್‍ಡಿಆರ್10+ ಸಪೋರ್ಟ್, ಗ್ಯಾಮಾಕಲರ್ ಮ್ಯಾಜಿಕ್ ಚಿಪ್‍ಸೆಟ್, 50 W ಶಕ್ತಿಶಾಲಿ 8 ಸ್ಪೀಕರ್‌ಗಳು, ಆಕ್ಸಿಜನ್‍ಒಎಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯತೆಗಳನ್ನು ಈ ಒನ್‍ಪ್ಲಸ್ ಟಿವಿ ಹೊಂದಿದೆ.

LEAVE A REPLY

Please enter your comment!
Please enter your name here