ಸೆಪ್ಟೆಂಬರ್ ತಿಂಗಳಲ್ಲಿ ಜಾಗತಿಕವಾಗಿ ಒಟ್ಟು 30.6 ಕೋಟಿ ಆ್ಯಪ್‌ಗಳು ಡೌನ್‌ಲೋಡ್ ಆಗಿದ್ದು, ಅದರಲ್ಲಿ ಪ್ರಥಮ ಸ್ಥಾನದಲ್ಲಿರುವುದು ವಾಟ್ಸಾಪ್ ಅಂತ ಸ್ಟಾಟಿಸ್ಟಾ ಎಂಬ ಸಮೀಕ್ಷಾ ಸಂಸ್ಥೆಯ ವರದಿ ತಿಳಿಸಿದೆ. ಇದುವರೆಗೆ ವಾಟ್ಸಾಪ್ ಒಟ್ಟು 734.50 ಕೋಟಿ ಡೌನ್‌ಲೋಡ್ ಆಗಿದ್ದರೆ, 2ನೇ ಸ್ಥಾನದಲ್ಲಿ ಫೇಸ್‌ಬುಕ್ ಮೆಸೆಂಜರ್ (630.10 ಕೋಟಿ) ಹಾಗೂ ಇನ್‌ಸ್ಟಾಗ್ರಾಂ 3ನೇ ಸ್ಥಾನದಲ್ಲಿದೆ (378.50 ಕೋಟಿ). ಹೆಚ್ಚಿನವರು ಬಳಸುತ್ತಿರುವ ಫೇಸ್‌ಬುಕ್ ಆ್ಯಪ್ 4ನೇ ಸ್ಥಾನದಲ್ಲಿದೆ (276.90 ಕೋಟಿ). ಉಳಿದಂತೆ, ವಿಶ್ (257.90 ಕೋಟಿ), ಫೇಸ್‌ಬುಕ್ ಲೈಟ್ (230.30 ಕೋಟಿ), ಸ್ನ್ಯಾಪ್‌ಚಾಟ್ (171.20 ಕೋಟಿ), ಸಬ್‌ವೇ ಸರ್ಫರ್ಸ್ (135.10 ಕೋಟಿ), ಇಮೋ (124.10 ಕೋಟಿ) ಹಾಗೂ ಸ್ಪಾಟಿಫೈ ಮ್ಯೂಸಿಕ್ (122.80 ಕೋಟಿ) ಹತ್ತನೇ ಸ್ಥಾನದಲ್ಲಿದೆ.
ಇವನ್ನೂ ನೋಡಿ
Govo GoSorround 950 ಸೌಂಡ್ಬಾರ್: ಮನೆಯನ್ನೇ ಥಿಯೇಟರ್ ಆಗಿಸುವ ಸ್ಪೀಕರ್ ಸಿಸ್ಟಂ
Govo GoSorround 950: ಗೋವೊ ಗೋಸರೌಂಡ್ 950 ಸೌಂಡ್ಬಾರ್ ಬೆಲೆ ₹24,999.