ದಂಡ ಕೊಡು ಎನಗೆ!

4
802

ಅಂದು ನಿನ್ನ ನಾ ಕಂಡೆ
ಆಕರ್ಷಣೆ, ಪ್ರೇಮ ಇತ್ಯಾದಿಗಳ ಅರ್ಥವರಿಯಲು ಹೊರಟೆ
ನಿನ್ನ ಸೌಂದರ್ಯಕೆ ಮರುಳಾದೆ
ಆ ನಿನ್ನ ಹೊಳೆವ ಕಪ್ಪು ಕಂಗಳು
ಸದಾ ನಗುತ್ತಿರುವ ಅಧರಗಳು
ಮಲ್ಲಿಗೆ ಮುಡಿದ ಗುಂಗುರು ಕೂದಲು
ಸೌಂದರ್ಯವೆಂದರೆ ಇದೇಯೇ?

ಆನೇಕ ಕನಸುಗಳ ಮೂಲಕ ನಿನ್ನ ಮೂರ್ತಿಯನು
ಹೃದಯಮಂದಿರದಲ್ಲಿರಿಸಿ ಪ್ರತಿಷ್ಠಾಪಿಸಿದೆ
ಪ್ರೇಮಪೂಜೆ, ಪ್ರೇಮ ಜ್ವರಗಳಿಗೂ ಅರ್ಥ ಹುಡುಕಿದೆ
ಓದಲು ಕುಳಿತರೆ ಪುಸ್ತಕದಲಿ ಗೋಚರ
ಸುಮ್ಮನೇ ಇದ್ದರೆ ಮಸ್ತಕದಲಿ !
ತಿನ್ನಲು ಕುಳಿತರೆ ತಟ್ಟೆಯೊಳಗೆ ನಿನ್ನ ನಗು
ನಿನ್ನ ಜತೆ ಮಾತನಾಡಲೊಂದು ನೆವನ ಹುಡುಕಿ ಸುಸ್ತಾಗುವೆ

ಆ ನಿನ್ನ ನಗೆಯ ನೋಟವನು
ನನ್ನ ಹೃದಯ ಅರ್ಥೈಸಿಕೊಂಡಿದ್ದು
ಪ್ರೇಮ ಎಂಬ ಪದದಿಂದ
ಬಾಯಿಬಿಟ್ಟು ಹೇಳಲಾರದ ಸ್ಥಿತಿ ನನ್ನದು

ದಾರಿಯಲ್ಲಿ ಬೈಕ್ ಮೇಲೇರಿ ಹೋಗುತ್ತಿದ್ದರೂ
ನೆನಪು ನಿನ್ನದೇ ಕಾಡುತಿದೆ ಗೆಳತಿ ಕಾಡುತಿದೆ
ದಾರಿಹೋಕನೊಬ್ಬನ ಬಾಯಲ್ಲಿ ಸಹಸ್ರ ನಾಮಾರ್ಚನೆ ಕೇಳಿದಾಗಲಷ್ಟೇ
ನಾನು ವಾಸ್ತವ ಲೋಕಕೆ ಮರಳಿದೆ
ನನ್ನ ಬೈಕಿನ ಮುಂದಿನ ಚಕ್ರ
ಆತನ ಕಾಲನ್ನು ಮುದ್ದಿಸಿ ನನ್ನ ಛೇಡಿಸಿತ್ತು!

ನೀನು ಲಕ್ಕಿ, ನನಗೆ ಮಾತ್ರ ಬೈಗುಳದ ಸುರಿಮಳೆ
ತಪ್ಪು ನನ್ನದಲ್ಲ; ನಿನ್ನದು ಗೆಳತಿ
ಕೊಡುವೆಯಾ ಆತನಿಗೆ ದಂಡ???

(ಇದು ಕಾಲೇಜು ಜೀವನದ ಅವಧಿಯಲ್ಲಿ ರಚಿಸಿದ ಕವನವೊಂದರ ಕಚ್ಚಾ ರೂಪ!)

4 COMMENTS

  1. ಪ್ರೇಮಕವಿ ಅವಿಯವರಿಗೆ ನಮೋನ್ನಮಃ.

    ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಿ. ಪ್ರೇಮಿಯ ಪ್ರತಿಯೊಂದು ಹಂತವನ್ನೂ ಬರಹ ರೂಪದಲ್ಲಿ ಇಳಿಸಿರುವುದನ್ನು ನೋಡಿದರೆ, ಇಂತಹ ಕವನ ಬರೆಯಲು ಅನುಭವಸ್ಥ ಬರಹಗಾರರಿಂದ ಮಾತ್ರ ಸಾಧ್ಯ ಎಂಬುದು ನಿಸ್ಸಂಶಯ.

    ತುಂಬಾ ಸೊಗಸಾದ ವರ್ಣನೆ. ಆದರೊಂದೇ ಶಂಕೆ, ನನ್ನಲ್ಲಿ. ಗುಂಗುರು ಕೂದಲು ಎನ್ನುವುದು ತಲೆಯ ಮುಂಭಾಗದಲ್ಲಿ ಇರುವುದೋ ಅಥವಾ ಹಿಂಭಾಗದಲ್ಲಿ ಇರುವುದೋ (ಮಲ್ಲಿಗೆಯ ಹೂ ಮುಡಿವುದು ತಲೆಯ ಹಿಂಭಾಗದಲ್ಲಿ ತಾನೆ) – ನನಗೆ ಇದರ ವಿಷಯ ಅಷ್ಟು ಗೊತ್ತಿಲ್ಲ, ತಪ್ಪು ತಿಳಿಯಬೇಡಿ.

  2. ಅವೀ,

    ಕಾಲೇಜ್ ಜೀವನದಲ್ಲಿ ಬರೆದರೂ, ಈಗ ಬರೆದರೂ ಅ ಪ್ರೀತಿ ಅನ್ನೋದು ಅಷ್ಟೇ ಕಚಗುಳಿ ನೀಡುತ್ತೆ..ಅಲ್ವಾ !

    >Thu 18 Jan 2007
    ದಂಡ ಕೊಡು ಎನಗೆ!
    Posted by Avi under Just Kidding

    ಅಂದು ನಿನ್ನ ನಾ ಕಂಡೆ
    ಆಕರ್ಷಣೆ, ಪ್ರೇಮ ಇತ್ಯಾದಿಗಳ ಅರ್ಥವರಿಯಲು ಹೊರಟೆ
    ನಿನ್ನ ಸೌಂದರ್ಯಕೆ ಮರುಳಾದೆ
    ಆ ನಿನ್ನ ಹೊಳೆವ ಕಪ್ಪು ಕಂಗಳು
    ಸದಾ ನಗುತ್ತಿರುವ ಅಧರಗಳು
    ಮಲ್ಲಿಗೆ ಮುಡಿದ ಗುಂಗುರು ಕೂದಲು
    ಸೌಂದರ್ಯವೆಂದರೆ ಇದೇಯೇ?

    ಆನೇಕ ಕನಸುಗಳ ಮೂಲಕ ನಿನ್ನ ಮೂರ್ತಿಯನು
    ಹೃದಯಮಂದಿರದಲ್ಲಿರಿಸಿ ಪ್ರತಿಷ್ಠಾಪಿಸಿದೆ
    ಪ್ರೇಮಪೂಜೆ, ಪ್ರೇಮ ಜ್ವರಗಳಿಗೂ ಅರ್ಥ ಹುಡುಕಿದೆ
    ಓದಲು ಕುಳಿತರೆ ಪುಸ್ತಕದಲಿ ಗೋಚರ
    ಸುಮ್ಮನೇ ಇದ್ದರೆ ಮಸ್ತಕದಲಿ !
    ತಿನ್ನಲು ಕುಳಿತರೆ ತಟ್ಟೆಯೊಳಗೆ ನಿನ್ನ ನಗು
    ನಿನ್ನ ಜತೆ ಮಾತನಾಡಲೊಂದು ನೆವನ ಹುಡುಕಿ ಸುಸ್ತಾಗುವೆ

    >ಆ ನಿನ್ನ ನಗೆಯ ನೋಟವನು
    ನನ್ನ ಹೃದಯ ಅರ್ಥೈಸಿಕೊಂಡಿದ್ದು
    ಪ್ರೇಮ ಎಂಬ ಪದದಿಂದ
    ಬಾಯಿಬಿಟ್ಟು ಹೇಳಲಾರದ ಸ್ಥಿತಿ ನನ್ನದು

    ದಾರಿ ತಪ್ಪಿಸಬಹುದಾದ ನಗೆ ಅದು 🙂

    ತವಿಶ್ರೀಗಳೇ,
    ಬಹುಷ: ‘ಮಲ್ಲಿಗೆ ಮುಡಿದ ಹಿಂಗೂದಲು-ಗುಂಗರು ಕೂದಲು’ ಒಂದೇ ತಲೆಯದೇ ಆದ್ದರಿಂದ ಅವೀ ಸಮಾಸಪ್ರಯೋಗ ಮಾಡಿ ಮಲ್ಲಿಗೆ ಮುಡಿದ ಗುಂಗುರು ಕೂದಲು ಅಂದಿರಬಹುದೇ 🙂

  3. ಶ್ರೀನಿವಾಸರೆ,
    ಕೂದಲು ತಲೆಯಲ್ಲೇ ಇರುವುದರಿಂದ ಅದಕ್ಕೆ ಮುಂಭಾಗ ಹಿಂಭಾಗ ಎಂಬ ಭೇದವೇಕೆ ? 🙂 ಮತ್ತೆ, ಈಗಿನ ಕಾಲದಲ್ಲಿ ಮಲ್ಲಿಗೆಯನ್ನು ಮುಡಿಗೇ ಮುಡಿಯುವ ಬದಲು ನೆತ್ತಿಗೂ ಸಿಕ್ಕಿಸುತ್ತಾರಲ್ಲಾ…?

  4. ಶಿವ್ ಅವರೆ,
    ಖಂಡಿತಾ ಹೌದು, ಪ್ರೀತಿ ಪ್ರೇಮ ಎನ್ನೋದು ಚಿರನೂತನ. ಪ್ರತಿಯೊಬ್ಬನಿಗೂ ಜೀವನದ ಒಂದಲ್ಲ ಒಂದು ಹಂತದಲ್ಲಿ ಇದರ ಸವಿ ಅನುಭವ ಆಗಿಯೇ ಆಗುತ್ತದೆ. ಆದರೆ ಇದರ ರೂಪಗಳು ವಿಭಿನ್ನವಾಗಿರಬಹುದು.

LEAVE A REPLY

Please enter your comment!
Please enter your name here