ಟೆಕ್ ಟಾನಿಕ್: ಮೊಬೈಲಲ್ಲಿ ಟ್ವಿಟರ್ ಲಾಗೌಟ್

0
325

ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಖಾತೆಯಲ್ಲಿ ಲಾಗಿನ್ ಆಗಿದ್ದರೆ, ಅದರಿಂದ ಲಾಗೌಟ್ ಮಾಡುವುದು ಹೇಗೆ? ಈ ಪ್ರಶ್ನೆ ಹಲವರಿಗೆ ಕಾಡಿದ್ದಿದೆ. ಟ್ವಿಟರ್ ಆ್ಯಪ್‌ನಲ್ಲಿ ಲಾಗೌಟ್ ಆಯ್ಕೆಯು ಕಣ್ಣಿಗೆ ನೇರವಾಗಿ ಕಾಣಿಸದಂಥ ಸ್ಥಳದಲ್ಲಿರುತ್ತದೆ. ಲಾಗೌಟ್ ಬಟನ್ ನೋಡಲು ಹೀಗೆ ಮಾಡಿ:

ಟ್ವಿಟರ್ ಆ್ಯಪ್ ಓಪನ್ ಮಾಡಿ, ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಸ್ಪರ್ಶಿಸಿ. ಕಾಣಿಸಿಕೊಳ್ಳುವ ಮೆನು ಸ್ಕ್ರೀನ್‌ನಲ್ಲಿ ಕೆಳಗೆ ‘ಸೆಟ್ಟಿಂಗ್ಸ್ ಆ್ಯಂಡ್ ಪ್ರೈವೆಸಿ’ ಎಂದಿರುವಲ್ಲಿ ಸ್ಪರ್ಶಿಸಿದಾಗ ಮತ್ತೊಂದು ಸ್ಕ್ರೀನ್ ಪಾಪ್-ಅಪ್ ಆಗುತ್ತದೆ. ಅಲ್ಲಿ ‘ಅಕೌಂಟ್’ ಎಂಬುದನ್ನು ಕ್ಲಿಕ್ ಮಾಡಿದಾಗ ತಳಭಾಗದಲ್ಲಿ ಲಾಗೌಟ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಟ್ವಿಟರ್ ಆ್ಯಪ್‌ನ ಮತ್ತೊಂದು ಅನುಕೂಲವೆಂದರೆ, ಎರಡೆರಡು ಟ್ವಿಟರ್ ಖಾತೆಗಳಿದ್ದರೆ, ಒಂದೇ ಟ್ವಿಟರ್ ಆ್ಯಪ್ ಮೂಲಕವಾಗಿ ಎರಡಕ್ಕೂ ಲಾಗಿನ್ ಆಗಬಹುದು.

LEAVE A REPLY

Please enter your comment!
Please enter your name here