ಫೇಸ್‌ಬುಕ್‌ನಲ್ಲಿ ನಿಮ್ಮ ಪ್ರಪ್ರಥಮ ಪೋಸ್ಟ್ ಯಾವುದು ಅಂತ ಹುಡುಕುವುದು ಹೇಗೆ ಗೊತ್ತೇ? ನಿಮ್ಮ ಪ್ರೊಫೈಲ್ ಪುಟ ಓಪನ್ ಮಾಡಿ. ಮೇಲೆ ಕವರ್ ಪಿಕ್ಚರ್‌ನ ಬಲ ಕೆಳ ಮೂಲೆಯಲ್ಲಿ ‘ವ್ಯೂ ಆ್ಯಕ್ಟಿವಿಟಿ ಲಾಗ್’ ಅಂತ ಇರುವುದನ್ನು ಕ್ಲಿಕ್ ಮಾಡಿ. ಬಲಭಾಗದಲ್ಲಿ ಇಸವಿಗಳ ಪಟ್ಟಿ ಕಾಣಿಸುತ್ತದೆ. ತಳ ಭಾಗದಲ್ಲಿರುವ ಇಸವಿಯನ್ನು ಕ್ಲಿಕ್ ಮಾಡಿ. ಅಥವಾ, ಎಡಭಾಗದಲ್ಲಿ ‘ಫಿಲ್ಟರ್ಸ್’ ಅಂತ ಇರುವಲ್ಲಿ ‘ಪೋಸ್ಟ್ಸ್’ ಎಂಬುದನ್ನು ಕೂಡ ಕ್ಲಿಕ್ ಮಾಡಿ, ಬಲಭಾಗದಲ್ಲಿರುವ ಕಟ್ಟಕಡೆಯ ಇಸವಿಯನ್ನು ಕ್ಲಿಕ್ ಮಾಡಬಹುದು. ಅದೇ ರೀತಿ, ನೀವು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ ಮೊದಲ ಫೋಟೋ ಅಥವಾ ವೀಡಿಯೋ ಯಾವುದೆಂದು ತಿಳಿಯಬೇಕಿದ್ದರೆ, ಎಡಭಾಗದಲ್ಲಿ ‘ಫೋಟೋಸ್ ಆ್ಯಂಡ್ ವೀಡಿಯೋಸ್’ ಕ್ಲಿಕ್ ಮಾಡಿ, ಲಭ್ಯವಿರುವ ಕೊನೆಯ ಇಸವಿಯನ್ನು ಆಯ್ಕೆ ಮಾಡಿ. ನೀವು ಹಾಕಿದ ಮೊದಲ ಪೋಸ್ಟ್ ಗೋಚರಿಸದಿದ್ದರೆ (ಅಂದರೆ ಖಾತೆ ತೆರೆದ ಬಳಿಕ ಪೋಸ್ಟ್ ಮಾಡಿರದೇ ಇದ್ದರೆ), ಒಂದೊಂದೇ ತಿಂಗಳ/ವರ್ಷದ ಹೆಸರಿನ ಮೇಲೆ ಕ್ಲಿಕ್ ಮಾಡುತ್ತಾ ಹೋಗಿ. ನಿಮ್ಮ ಮೊದಲ ಪೋಸ್ಟ್ ತಳ ಭಾಗದಲ್ಲಿ ಕಾಣಿಸುತ್ತದೆ.
ಇವನ್ನೂ ನೋಡಿ
ಚೀನಾದ ‘ಆತ್ಮನಿರ್ಭರತೆ’: Great Firewall of China!
ಚೀನಾದಲ್ಲಿ ಫೇಸ್ಬುಕ್, ಟ್ವಿಟರ್, ವಾಟ್ಸ್ಆ್ಯಪ್ ಮಾತ್ರವಲ್ಲ, ಟಿಕ್ಟಾಕ್ ಕೂಡ ಇಲ್ಲ! ಚೀನಾದಲ್ಲಿ ಭಾರತದಲ್ಲಿರುವಷ್ಟು ಇಂಟರ್ನೆಟ್ ಸ್ವಾತಂತ್ರ್ಯ ಇಲ್ಲ. ಜಾಗತಿಕವಾಗಿ ಗರಿಷ್ಠ ಬಳಕೆಯಾಗುತ್ತಿರುವ ಗೂಗಲ್, ಟ್ವಿಟರ್, ಫೇಸ್ಬುಕ್,...