ಟೆಕ್ ಟಾನಿಕ್: ಟ್ವಿಟರ್ ವೀಡಿಯೋ ಡೌನ್‌ಲೋಡ್ ಮಾಡುವುದು ಹೇಗೆ

0
357

ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದ ಜನಪ್ರಿಯತೆ ಹೆಚ್ಚಿದೆ. ಈಗ ಆನ್‌ಲೈನ್ ಸಾಮಾಜಿಕ ಚಟುವಟಿಕೆಯಲ್ಲಿ ಅದರ ಪಾಲೂ ಬೆಳೆಯತ್ತಿದೆ. ಕ್ಷಿಪ್ರವಾಗಿ ಸುದ್ದಿ ತಿಳಿಯಲು, ತತ್‌ಕ್ಷಣದ ವೀಡಿಯೋ, ಫೋಟೋ ನೋಡಲು ಜತೆಗೆ ಅಧಿಕಾರಿಗಳ, ಸರಕಾರದ ಪ್ರತಿನಿಧಿಗಳ ಕ್ಷಿಪ್ರ ಸಂಪರ್ಕಕ್ಕೂ ಅದುವೇ ಬಳಕೆಯಾಗುತ್ತಿದೆ. ಅದರಲ್ಲಿ ಬರುವ ವೀಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? http://twittervideodownloader.com/download ಎಂಬ ತಾಣ ಇದಕ್ಕಾಗಿ ಸಹಕರಿಸುತ್ತದೆ. ನಿಮಗೆ ಬೇಕಾದ ಟ್ವೀಟ್ ಸಂದೇಶದ ನಿರ್ದಿಷ್ಟ ಯುಆರ್‌ಎಲ್ ನಕಲಿಸಿಕೊಂಡು, ಅದನ್ನು ಈ ಜಾಲತಾಣದ ಬಾಕ್ಸ್‌ನಲ್ಲಿ ಪೇಸ್ಟ್ ಮಾಡಿ, ಡೌನ್‌ಲೋಡ್ ಎಂದು ಬರೆದಿರುವ ಬಟನ್ ಮೇಲೆ ಕ್ಲಿಕ್ ಮಾಡಿದರಾಯಿತು. ನಿಮ್ಮ ಕಂಪ್ಯೂಟರಿನ ಡೌನ್‌ಲೋಡ್ ಎಂಬ ಫೋಲ್ಡರ್‌ನಲ್ಲಿ ಈ ವೀಡಿಯೋ ಬಂದು ಕುಳಿತಿರುತ್ತದೆ. ನೆನಪಿಡಿ, ಇಂಥ ಯಾವುದೇ ವೀಡಿಯೋಗಳನ್ನು ಆನಂದಿಸಬಹುದೇ ಹೊರತು, ಅನುಮತಿಯಿಲ್ಲದೆ ಬೇರೆಡೆ ಬಳಸುವಂತಿಲ್ಲ.

LEAVE A REPLY

Please enter your comment!
Please enter your name here