
ಫೇಸ್‌ಬುಕ್ ಇದೀಗ ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರ ಅಗತ್ಯವೂ ಅನಿವಾರ್ಯ ಸಂಗಾತಿಯೂ ಆಗಿಬಿಟ್ಟಿದೆ. ಇಲ್ಲಿ ಜನ್ಮದಿನಕ್ಕೆ ಶುಭಾಶಯ ಹೇಳುವಲ್ಲಿಂದ ಹಿಡಿದು, ಗುಡ್ ಮಾರ್ನಿಂಗ್, ಶುಭ ರಾತ್ರಿ, ಗುಡ್ ನೈಟ್ ಇತ್ಯಾದಿ ಹಾರೈಕೆಗಳು, ಮಾಡಿದ ಸಾಧನೆಗೆ ಅಭಿನಂದನೆಗಳು ಸಾಕಷ್ಟು ಪ್ರಮಾಣದಲ್ಲಿ ಹರಿದಾಡುತ್ತಿವೆ. ಇದನ್ನು ಮನಗಂಡೇ ಫೇಸ್‌ಬುಕ್ ಕೂಡ ತನ್ನ ಬಳಕೆದಾರರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ಸಾಧ್ಯತೆಗಳನ್ನೂ ಪರಿಚಯಿಸುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂದರೆ, ನೀವು ‘Congrats’ ಅಥವಾ ‘ಶುಭಾಶಯ’ ಎಂಬ ಪದಗಳಿರುವ ಯಾವುದೇ ಲೇಖನ ಪೋಸ್ಟ್ ಮಾಡಿದಾಗ ಅದು ಕೆಂಬಣ್ಣದಲ್ಲಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಮತಾಪು, ಬಲೂನುಗಳು ಹಾರಿಬರುತ್ತವೆ. ಪೋಸ್ಟ್ ಮಾಡಿದಾಗಲೇ ಬಲೂನುಗಳು ಹಾರಾಡಿದ ಅನುಭವವಾಗುತ್ತದೆ. ನಂತರ ಯಾರೇ ಆ ಪದಗಳ ಮೇಲೆ ಕ್ಲಿಕ್ ಮಾಡಿದರೂ, ಮತ್ತೆ ಮತ್ತೆ ಸೆಲೆಬ್ರೇಶನ್ನು. ಚೆಕ್ ಮಾಡಿ ನೋಡಿ.
Like this:
Like Loading...
Related