ಐಸಿಸ್ ಸೇರಿದಂತೆ ವಿಭಿನ್ನ ಭಯೋತ್ಪಾದಕ ಸಂಘಟನೆಗಳನ್ನು ಯುವಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಸಾಮಾಜಿಕ ಜಾಲ ತಾಣಗಳನ್ನೇ ಪ್ರಧಾನವಾಗಿ ಬಳಸುತ್ತಿವೆ. ವಿಶೇಷವಾಗಿ ಫೇಸ್‌ಬುಕ್‌ನಲ್ಲಿ ಈ ಉಗ್ರ ಸಂಘಟನೆಗಳು ಪ್ರಚಾರ, ಪ್ರಸಾರ ಕಾರ್ಯದಲ್ಲಿ ತೊಡಗಿರುತ್ತವೆ. ಇದೀಗ ಉಗ್ರವಾದಕ್ಕೆ ಪ್ರಚೋದಿಸುವ ವಿಷಯಗಳನ್ನು ಪತ್ತೆ ಹಚ್ಚಲು ಫೇಸ್‌ಬುಕ್ ಕೃತಕ ಜಾಣ್ಮೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿದೆ. ಈ ತಂತ್ರಜ್ಞಾನದೊಂದಿಗೆ ಮಾನವನ ಹಸ್ತಕ್ಷೇಪವನ್ನೂ ಮಿಳಿತಗೊಳಿಸಿ, ಭಯೋತ್ಪಾದನೆಗೆ ಸಂಬಂಧಿಸಿದ ಯಾವುದೇ ವಿಷಯ ಪೋಸ್ಟ್ ಆಗುವ ಸಂದರ್ಭದಲ್ಲಿ ಬೇರೆ ಬಳಕೆದಾರರು ಅದನ್ನು ನೋಡುವ ಮುನ್ನವೇ ಪತ್ತೆ ಹಚ್ಚಿ, ಅಳಿಸಿಬಿಡುವ ವ್ಯವಸ್ಥೆಯದು. ಈಗಾಗಲೇ ಚೈಲ್ಡ್ ಪೋರ್ನೋಗ್ರಫಿ ನಿಯಂತ್ರಣಕ್ಕೆ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ನಲ್ಲಿ ಇಂಥದ್ದೇ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದುವರೆಗೆ, ಬಳಕೆದಾರರು ವರದಿ ಮಾಡಿದರೆ ಮಾತ್ರವೇ ಆಕ್ಷೇಪಾರ್ಹ ಅಂಶಗಳನ್ನು ಫೇಸ್‌ಬುಕ್ ಅಳಿಸಿಹಾಕುತ್ತಿತ್ತು. ಇನ್ನು ಭಯೋತ್ಪಾದಕ ಸಂಗತಿಗಳು ಸ್ವಯಂಚಾಲಿತವಾಗಿ ಅಳಿದು ಹೋಗಲಿವೆ.
ಇವನ್ನೂ ನೋಡಿ
ಇಂಟರ್ನೆಟ್ಟಲ್ಲಿ ಯೂನಿಕೋಡ್ ಕನ್ನಡ ಬಳಕೆ: ನೆಪ ಹೇಳೋ ಹಾಗಿಲ್ಲ
ಮಾಹಿತಿ-ತಂತ್ರಜ್ಞಾನ ಯುಗದಲ್ಲಿ ವಿಶ್ವದ ಎಲ್ಲ ಭಾಷೆಗಳಿಗೆ ಸಮದಂಡಿಯಾಗಿ ಕನ್ನಡವೂ ಬೆಳೆಯಬೇಕೆಂಬ ಇರಾದೆಯೊಂದಿಗೆ, ಕನ್ನಡದ ಮನಸ್ಸುಳ್ಳ ತಂತ್ರಜ್ಞರ ನಿಸ್ವಾರ್ಥ ಶ್ರಮದೊಂದಿಗೆ ಯೂನಿಕೋಡ್ ಎಂಬ ಸಾರ್ವತ್ರಿಕ ಶಿಷ್ಟತೆಯಲ್ಲಿ ಕನ್ನಡ ಬೆರೆತು ಹೋಗಿ ಪ್ರಗತಿ ಸಾಧಿಸಲಾರಂಭಿಸಿ ದಶಕವೇ...
