ಭಾರತೀಯ ಟೆಲಿಕಾಂ ಪ್ರಾಧಿಕಾರವು ಬಳಕೆದಾರರಿಗೆ ಅತ್ಯುತ್ತಮ ಆನ್‌ಲೈನ್ ಟೂಲ್ ಒಂದನ್ನು ಒದಗಿಸಿದೆ. ಬೇರೆ ಬೇರೆ ಟೆಲಿಕಾಂ ಸರ್ವಿಸ್ ಪ್ರೊವೈಡರ್‌ಗಳ ಟ್ಯಾರೀಫ್ ಹೇಗಿದೆ ಅಂತ ತಿಳಿದುಕೊಂಡು ಹೋಲಿಸಿ ನೋಡುವ ಒಂದು ಜಾಲ ತಾಣವನ್ನು ರೂಪಿಸಿದೆ. ಅದನ್ನು tariff.trai.gov.in ಎಂಬಲ್ಲಿ ನೋಡಬಹುದು. ಸದ್ಯಕ್ಕೆ ಇದು ದಿಲ್ಲಿ ಟೆಲಿಕಾಂ ವೃತ್ತದ ದರಗಳನ್ನು ಮಾತ್ರ ತೋರಿಸುತ್ತಿದೆ. ಶೀಘ್ರದಲ್ಲೇ ಕರ್ನಾಟಕದ ವೃತ್ತವೂ ಸೇರಿಕೊಳ್ಳುವ ನಿರೀಕ್ಷೆ ಇದೆ. ಆದರೆ, ನಮ್ಮ ಆಪರೇಟರ್‌ಗಳ (ಏರ್‌ಟೆಲ್, ಐಡಿಯಾ, ಬಿಎಸ್ಸೆನ್ನೆಲ್, ವೊಡಾಫೋನ್, ಜಿಯೋ ಇತ್ಯಾದಿ) ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ದರ ವ್ಯವಸ್ಥೆಯನ್ನು ತುಲನೆ ಮಾಡಿ ನೋಡಲು, ನಮಗೆ ಬೇಕಾದ ಆಯ್ಕೆಯನ್ನು ಮಾಡಿಕೊಳ್ಳುವಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಈ ಪುಟದಲ್ಲಿ ವೃತ್ತವನ್ನು ಹಾಗೂ ಆಪರೇಟರ್ ಆಯ್ಕೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ. ಇದರ ಮೇಲೆ ಕಣ್ಣಿಟ್ಟಿರಿ. ಕರ್ನಾಟಕವೂ ಸೇರ್ಪಡೆಯಾಗಬಹುದು.
ಇವನ್ನೂ ನೋಡಿ
Apple iPad 10 Review: ಮಿನಿ ಲ್ಯಾಪ್ಟಾಪ್ ಸಾಮರ್ಥ್ಯದ ಆ್ಯಪಲ್ ಐಪ್ಯಾಡ್ 10
9ನೇ ಪೀಳಿಗೆಯ ಐಪ್ಯಾಡ್ಗಿಂತ Apple iPad 10th Generation ಹೆಚ್ಚು ಶಕ್ತಿಶಾಲಿಯಾಗಿದೆ. ಉತ್ತಮ ಡಿಸ್ಪ್ಲೇ, ಹೆಚ್ಚು ವೇಗ ಹೊಂದಿದೆ.